ಕ್ಯಾನ್ಸರ್ನಿಂದ ಬಳಲುತ್ತಿದ್ದ 10 ವರ್ಷದ ಬಾಲಕನ ಕನಸು ಈಡೇರಿಸಿದ ಬೆಂಗಳೂರು ಉತ್ತರ ವಿಭಾಗದ ಪೊಲೀಸರು
ಬೆಂಗಳೂರು ಉತ್ತರ ವಿಭಾಗದ ಪೊಲೀಸರು(Bangalore North Division Police) ಕ್ಯಾನ್ಸರ್ನಿಂದ ಬಳಲುತ್ತಿದ್ದ 10 ವರ್ಷದ ಬಾಲಕನ ಕನಸನ್ನು ಈಡೇರಿಸಿದ್ದಾರೆ. ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಹಯೋಗದಿಂದ ಬಾಲಕನನ್ನ ಒಂದು ದಿನಕ್ಕೆ ಪೊಲೀಸ್ ಅಧಿಕಾರಿ ಮಾಡುವ ಮೂಲಕ ಆತನ ಐಪಿಎಸ್ ಕನಸು ಈಡೇರಿಸಿದ್ದಾರೆ.
ಬೆಂಗಳೂರು, ಮಾ.13: ಕ್ಯಾನ್ಸರ್ನಿಂದ ಬಳಲುತ್ತಿದ್ದ 10 ವರ್ಷದ ಬಾಲಕನ ಕನಸನ್ನು ಬೆಂಗಳೂರು ಉತ್ತರ ವಿಭಾಗದ ಪೊಲೀಸರು(Bangalore North Division Police)ಈಡೇರಿಸಿದ್ದಾರೆ. ಹೌದು, ಬಾಲಕ ಮಲ್ಲಿಕಾರ್ಜುನ ಐಪಿಎಸ್ ಮಾಡುವ ಕನಸು ಹೊಂದಿದ್ದ. ಆದ್ರೆ, ಈ ವಯಸ್ಸಿನಲ್ಲೇ ಕ್ಯಾನ್ಸರ್ ಮಲ್ಲಿಕಾರ್ಜುನನ ದೇಹ ವಕ್ಕರಿಸಿದೆ. ಇದೀಗ ಕ್ಯಾನ್ಸರ್ನಿಂದಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗಾಗಿ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಹಯೋಗದಿಂದ ಬಾಲಕನನ್ನ ಒಂದು ದಿನಕ್ಕೆ ಪೊಲೀಸ್ ಅಧಿಕಾರಿ ಮಾಡುವ ಮೂಲಕ ಆತನ ಐಪಿಎಸ್ ಕನಸು ಈಡೇರಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸೈದುಲು ಅಡಾವತ್ ಬಾಲಕನಿಗೆ ಪೊಲೀಸ್ ಗೌರವ ನೀಡಿದ್ದಾರೆ. ಈ ಮೂಲಕ ಇಂದು(ಮಾ.13)ಉತ್ತರ ವಿಭಾಗ ಡಿಸಿಪಿ ಕಚೇರಿ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Mar 13, 2024 05:22 PM
Latest Videos