ನನ್ನ ಪತಿಯನ್ನು ಕೊಂದವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಪ್ರವೀಣ್ ನೆಟ್ಟಾರು ಪತ್ನಿ ಕುಮಾರಸ್ವಾಮಿಗೆ ಹೇಳಿದರು
‘ನೀವು ನಮಗೂ ಸಾಂತ್ವನ ಹೇಳುತ್ತೀರಿ, ಮಸೂದ್ ಮನೆಗೆ ಹೋಗಿ ಅಲ್ಲೂ ಇದನ್ನೇ ಮಾಡುತ್ತೀರಿ, ಅದರಿಂದ ನನಗೇನೂ ಬೇಸರವಿಲ್ಲ, ಆದರೆ ನನ್ನ ಪತಿಯನ್ನು ಕೊಂದವರಿಗೆ ಗಲ್ಲು ಶಿಕ್ಷೆಯಾಗಬೇಕು,’ ಎಂದು ಅವರು ಹೇಳಿದರು.
ಮಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಕಳೆದ ವಾರ ಬೆಳ್ಳಾರೆಯಲ್ಲಿ ಹತ್ಯೆಗೊಳಗಾದ ಯುವ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು (Praveen Nettaru) ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ದುಃಖದ ಮಡುವಿನಲ್ಲಿರುವ ಮೃತರ ಪತ್ನಿ ನೂತನ್ ಆ ಸಂದರ್ಭದಲ್ಲಿ ಬಹಳ ಖಾರವಾಗಿ ಮಾತಾಡಿದರು. ‘ನೀವು ನಮಗೂ ಸಾಂತ್ವನ ಹೇಳುತ್ತೀರಿ, ಮಸೂದ್ ಮನೆಗೆ ಹೋಗಿ ಅಲ್ಲೂ ಇದನ್ನೇ ಮಾಡುತ್ತೀರಿ, ಅದರಿಂದ ನನಗೇನೂ ಬೇಸರವಿಲ್ಲ, ಆದರೆ ನನ್ನ ಪತಿಯನ್ನು ಕೊಂದವರಿಗೆ ಗಲ್ಲು ಶಿಕ್ಷೆಯಾಗಬೇಕು,’ ಎಂದು ಅವರು ಹೇಳಿದರು.