Video: ಪ್ರಾಣಿಗಳ ಮೇಲೆ ಸ್ವಲ್ಪ ದಯೆ ಇರಲಿ, ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೆನಿಗಂಜ್ ಪ್ರದೇಶದಲ್ಲಿ ನ್ಯಾಯಮೂರ್ತಿ ಮನೆ ಎದುರು ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮನೆ ಎದುರು ಹೊಸದಾಗಿ ನಿರ್ಮಿಸಲಾಗುತ್ತಿರುವ ರಸ್ತೆಯ ಮೇಲೆ ನಾಯಿ ನಡೆದಾಡಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಬೆನ್ನಟ್ಟುತ್ತಾ ಬಂದು ಗುಂಡು ಹಾರಿಸಿರುವುದನ್ನು ಕಾಣಬಹುದು.
ಪ್ರಯಾಗ್ರಾಜ್, ಡಿಸೆಂಬರ್ 20: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೆನಿಗಂಜ್ ಪ್ರದೇಶದಲ್ಲಿ ನ್ಯಾಯಮೂರ್ತಿ ಮನೆ ಎದುರು ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮನೆ ಎದುರು ಹೊಸದಾಗಿ ನಿರ್ಮಿಸಲಾಗುತ್ತಿರುವ ರಸ್ತೆಯ ಮೇಲೆ ನಾಯಿ ನಡೆದಾಡಿದ್ದಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಭದ್ರತಾ ಸಿಬ್ಬಂದಿ ಬೀದಿ ನಾಯಿಯನ್ನು ಬೆನ್ನಟ್ಟುತ್ತಾ ಬಂದು ಗುಂಡು ಹಾರಿಸಿರುವುದನ್ನು ಕಾಣಬಹುದು.
ನಾಯಿಯನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ ಮತ್ತು ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿ ರಕ್ಷಕ ವಿದಿತ್ ಶರ್ಮಾ ಒತ್ತಾಯಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ರಾಜೇಂದ್ರ ಪಾಂಡೆ ಎಂದು ಗುರುತಿಸಲಾಗಿದೆ. ಆತ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಕೈಲಾಶ್ ನಾಥ್ ಸಿನ್ಹಾ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ