Ailing Ambulance: ನಂಜನಗೂಡು ತಾಲ್ಲೂಕು ಹೆರಿಗೆ ಅಸ್ಪತ್ರೆಯ ಅಂಬ್ಯುಲೆನ್ಸ್ ಕೆಟ್ಟು ಗರ್ಭಿಣಿಯರ ಪರದಾಟ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ!

|

Updated on: Jul 03, 2023 | 10:48 AM

ಮೈಸೂರು ಜಿಲ್ಲಾ ವೈದ್ಯಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಸಾರ್ವಜನಿಕರ ಹೇವರಿಕೆಗೆ ಮತ್ತು ಆಕ್ರೋಷಕ್ಕೆ ಕಾರಣವಾಗಿದೆ.

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕು ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ (women and health) ಆಸ್ಪತ್ರೆಯ ಸದ್ಯದ ಸ್ಥಿತಿ ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅರ್ಜೆಂಟ್ ಗಮನಹರಿಸಬೇಕಿದೆ. ಆಸ್ಪತ್ರೆ ಮುಂದೆ ನಿಂತಿರುವ 108 ಅಂಬ್ಯುಲೆನ್ಸ್ ಕಳೆದೊಂದು ವಾರದಿಂದ ಕೆಟ್ಟು ನಿಂತಿದೆ. ಹೆರಿಗೆ ನೋವು ಕಾಣಿಸಿಕೊಂಡ ತುರ್ತು ಸಂದರ್ಭಗಳಲ್ಲಿ ಮಹಿಳೆಯರು 108ಗೆ ಕರೆ ಮಾಡಿದರೆ ಅಂಬ್ಯುಲೆನ್ಸ್ ಸಿಗುತ್ತಿಲ್ಲ. ದೂರದೂರದ ಹಳ್ಳಿಗಳಲ್ಲಿರುವ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ಜಿಲ್ಲಾ ವೈದ್ಯಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಸಾರ್ವಜನಿಕರ ಹೇವರಿಕೆಗೆ ಮತ್ತು ಆಕ್ರೋಷಕ್ಕೆ ಕಾರಣವಾಗಿದೆ. ಕೆಟ್ಟ ವಾಹನ ಸರಿಪಡಿಸಲು ಸಹ ಅಧಿಕಾರಿಗಳಿಗೆ ಸಚಿವರಿಂದ ಸೂಚನೆ ಬರಬೇಕೇ? ಜನರ ಅದರಲ್ಲೂ ವಿಶೇಷವಾಗಿ ಗರ್ಭಿಣಿ ಮಹಿಳೆಯರ ಜೀವದೊಂದಿಗೆ ಚೆಲ್ಲಾಟವಾಡೋದು ಸರಿಯಲ್ಲ ಪ್ರಭೃತಿಗಳೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ