Kalaburagi: ಈ ವಾರವೂ ಮುಂದುವರಿದ ತರಕಾರಿ ಬೆಲೆ ಹೆಚ್ಚಳ, ಸುರಿಯದ ಮಳೆಯನ್ನು ದೂಷಿಸುತ್ತಿರುವ ವ್ಯಾಪಾರಿಗಳು
ಕೇವಲ ಟೊಮೆಟೊ ಮತ್ತು ಮೆಣಸಿನಕಾಯಿ ಮಾತ್ರ ಅಲ್ಲ, ಬೇರೆಲ್ಲ ತರಕಾರಿಗಳ ಬೆಲೆ ಕನಿಷ್ಟ ಹತ್ತತ್ತು ರೂಪಾಯಿ ಜಾಸ್ತಿಯಾಗಿದೆಯಂತೆ.
ಕಲಬುರಗಿ: ತರಕಾರಿ ಬೆಲೆಗಳ ಮೇಲ್ಮುಖ ದೌಡು (surge) ಈ ವಾರವೂ ಮುಂದುವರಿದಿದೆ. ಕಲಬುರಗಿಯಲ್ಲಿ ಇವತ್ತು ಟೊಮೆಟೊ (tomato) ಬೆಲೆ ಪ್ರತಿ ಕೆಜಿಗೆ ರೂ. 160. ಹಸಿರು ಮೆಣಸಿಮಕಾಯಿಗೂ (green chilly) ಮಾರ್ಕೆಟ್ ನಲ್ಲಿ ಅದೇ ಬೆಲೆ. ನಿಮಗೆ ಗೊತ್ತಿದೆ, ಕಳೆದ ವಾರ ಪ್ರತಿ ಕೆಜಿ ಟೊಮೆಟೊ ಬೆಲೆ ರೂ. 100 ಆಗಿತ್ತು. ಮಳೆ ವಿಳಂಬಗೊಂಡಿರುವ ಕಾರಣ ತರಕಾರಿ ಬೆಲೆ ಕೈಗೆಟುಕದಷ್ಟು ಮೇಲಕ್ಕೆ ಹೋಗಿವೆ ಅಂತ ನಗರದ ತರಕಾರಿ ವ್ಯಾಪಾರಿ ಹೇಳುತ್ತಾರೆ. ಬೆಲೆಯೇರಿಕೆಯ ಕಾರಣ ಅವರ ವ್ಯಾಪಾರ ಗಣನೀಯವಾಗಿ ಇಳಿಮುಖಗೊಂಡಿದೆ. ಒಂದು ಕೆಜಿ ಕಾಯಿಪಲ್ಲೆ ಕೊಳ್ಳುತ್ತಿದ್ದವರು ಅರ್ಧ ಕೆಜಿ, ಅರ್ಧ ಕೆಜಿ ಖರೀದಿಸುತ್ತಿದ್ದವರು ಕಾಲು ಕೆಜಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವ್ಯಾಪಾರಿ ಹೇಳುತ್ತಾರೆ. ಕೇವಲ ಟೊಮೆಟೊ ಮತ್ತು ಮೆಣಸಿನಕಾಯಿ ಮಾತ್ರ ಅಲ್ಲ, ಬೇರೆಲ್ಲ ತರಕಾರಿಗಳ ಬೆಲೆ ಕನಿಷ್ಟ ಹತ್ತತ್ತು ರೂಪಾಯಿ ಜಾಸ್ತಿಯಾಗಿದೆಯಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos