‘ವರಾಹ ಚಕ್ರ’ ಸಿನಿಮಾದಲ್ಲಿ ನಟಿಸುವುದು ಬೇಡ ಅಂದುಕೊಂಡಿದ್ದ ಪ್ರೇಮ ಮನಸ್ಸು ಬದಲಾಯಿಸಿದ್ದು ಏಕೆ?
Varaha Chakra: ಸಿನಿಮಾಗಳಲ್ಲಿ ಕಡಿಮೆ ನಟಿಸುತ್ತಿರುವ ಪ್ರೇಮ, 'ವರಾಹ ಚಕ್ರ' ಸಿನಿಮಾದ ನಿರ್ದೇಶಕರು ಕರೆ ಮಾಡಿದಾಗಲೂ, ನಟಿಸುವುದಿಲ್ಲ ಎಂದು ಹೇಳಬೇಕೆಂದು ಯೋಚಿಸಿದ್ದರಂತೆ, ಆದರೆ ನಿರ್ದೇಶಕರು ಕತೆ ಹೇಳಿದ ಬಳಿಕ ಪ್ರೇಮ ಮನಸ್ಸು ಬದಲಾಗಿದೆ.
‘ವರಾಹ ಚಕ್ರ‘ (Varaha Chakra) ಹೆಸರಿನ ಹೊಸ ಸಿನಿಮಾ ಒಂದು ಬರುತ್ತಿದೆ. ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ನಟಿ ಪ್ರೇಮಾ ಸಹ ಹಾಜರಿದ್ದರು. ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಪ್ರೇಮಾ, ಈ ಸಿನಿಮಾದ ನಿರ್ದೇಶಕರು ಕರೆ ಮಾಡಿದಾಗ, ನಟಿಸುವುದಿಲ್ಲ ಎಂದು ಹೇಳಲೆಂದೇ ತಯಾರಾಗಿದ್ದರಂತೆ. ಆದರೆ ಅವರು ಮನೆಗೆ ಬಂದು ಕತೆ ಹೇಳಿದಾಗ ಪ್ರೇಮಾ ಅವರಿಂದ ಅವಕಾಶವನ್ನು ನಿರಾಕರಿಸಲಾಗಲಿಲ್ಲವಂತೆ. ‘ವರಾಹ’ ಸಿನಿಮಾವನ್ನು ಮಂಜುನಾಥ್ ಮಸ್ಕಲ್ಮಟ್ಟಿ ನಿರ್ದೇಶನ ಮಾಡಿದ್ದು ನಟಿ ಪ್ರೇಮ (Prema), ಅರ್ಜುನ್ ದೇವ್, ನಾಗೇಂದ್ರ ಪ್ರಸಾದ್, ಸಾಯಿಕುಮಾರ್ ನಟಿಸಿರುವ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 17, 2023 10:42 PM
Latest Videos