Satyameva Jayate Convention: ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಒಂದು ವಾರ ಮೊದಲೇ ಕೊಲಾರದಲ್ಲಿ ಸಿದ್ಧತೆಗಳು ಆರಂಭಗೊಂಡಿವೆ
ಸಿದ್ಧತೆಗಳನ್ನು ವೀಕ್ಷಿಸಲು ಇಂದು ರಂದೀಪ್ ಸುರ್ಜೆವಾಲಾ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೋಲಾರಗೆ ಭೇಟಿ ನೀಡಲಿದ್ದಾರೆ.
ಕೋಲಾರ: ಹಾಗೆ ನೋಡಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಪ್ರಿಲ್ 5 ರಂದು ನಗರಕ್ಕೆ ಬರಬೇಕಿತ್ತು. ಆದರೆ ಅವರ ಪ್ರವಾಸವನ್ನು ಏಪ್ರಿಲ್ 9 ಕ್ಕೆ ಮುಂದೂಡಲಾಗಿದೆ. ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದಾಗುವುದಕ್ಕೆ ಮತ್ತು ಅವರಿಗೆ ಜೈಲು ಶಿಕ್ಷೆಯಾಗುವುದಕ್ಕೆ 2019ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣವೇ ಕಾರಣವಾಗಿತ್ತು. ಹಾಗಾಗಿ, ಅವರು ತಮ್ಮ ಹೋರಾಟವನ್ನು ಇಲ್ಲಿಂದಲೇ ಆರಂಭಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 9 ರಂದು ಕಾಂಗ್ರೆಸ್ ಪಕ್ಷದ ಸತ್ಯಮೇವ ಜಯತೆ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತಾಡಲಿದ್ದಾರೆ. ಕಾರ್ಯಕ್ರಮಕ್ಕೆ ಒಂದು ವಾರ ಮೊದಲೇ ತಯಾರಿ ನಡೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಿದ್ಧತೆಗಳನ್ನು ವೀಕ್ಷಿಸಲು ಇಂದು ರಂದೀಪ್ ಸುರ್ಜೆವಾಲಾ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೋಲಾರಗೆ ಭೇಟಿ ನೀಡಲಿದ್ದಾರೆ.
ಮತ್ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ