ಯಾದಗಿರಿ: ಸಾವಿನೊಂದಿಗೆ ಸರಸಕ್ಕಿಳಿದು ಉಕ್ಕಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದ ಲಾರಿ ಚಾಲಕನ ಪ್ರಾಣವನ್ನು ಸ್ಥಳೀಯರು ಉಳಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2022 | 2:50 PM

ಅದೃಷ್ಟವಶಾತ್ ಅವನನ್ನು ಗಮನಿಸಿದ ಸ್ಥಳೀಯರು ಹಗ್ಗದ ಮೂಲಕ ಸುರಕ್ಷಿತವಾಗಿ ದಡಕ್ಕೆ ಎಳೆದಿದ್ದಾರೆ. ಲಾರಿಯಲ್ಲಿ ಸಿಮೆಂಟ್ ಮೂಟೆಗಳ ಲೋಡ್ ಇತ್ತು.

ಯಾದಗಿರಿ (Yadgir) ಮತ್ತು ವಡಗೇರ ನಡುವಿನ ಮದರ್ ಕಲ್ ನಲ್ಲಿ ಉಕ್ಕಿ ಹರಿಯುತ್ತಿದ್ದ ಹಳ್ಳದ ಸೇತುವೆ (bridge) ಮೇಲಿಂದ ಲಾರಿ ದಾಟಿಸಲು ಪ್ರಯತ್ನಿಸಿದ ಚಾಲಕ (Driver) ತನ್ನ ಪ್ರಾಣದೊಂದಿಗೆ ಚೆಲ್ಲಾಟವಾಡಿದ್ದಾನೆ. ಲಾರಿ ಮುಗುಚಿಕೊಂಡು ಸೇತವೆ ಮೇಲಿಂದ ಹರಿಯುತ್ತಿರುವ ನದಿಗೆ ಉರುಳಿದೆ. ಚಾಲಕ ಲಾರಿಯಿಂದ ಹೊರಬಂದರೂ ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುವ ಅಪಾಯದಲ್ಲಿದ್ದ. ಅದೃಷ್ಟವಶಾತ್ ಅವನನ್ನು ಗಮನಿಸಿದ ಸ್ಥಳೀಯರು ಹಗ್ಗದ ಮೂಲಕ ಸುರಕ್ಷಿತವಾಗಿ ದಡಕ್ಕೆ ಎಳೆದಿದ್ದಾರೆ. ಲಾರಿಯಲ್ಲಿ ಸಿಮೆಂಟ್ ಮೂಟೆಗಳ ಲೋಡ್ ಇತ್ತು.