AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯನಗರ ರಾಯರ ಮಠದ ಬಳಿ ಸುಬುಧೇಂದ್ರ ತೀರ್ಥರಿಗೆ ಕೈ ಮುಗಿದು ನಮಿಸಿದ ಪ್ರಧಾನಿ ಮೋದಿ

ಜಯನಗರ ರಾಯರ ಮಠದ ಬಳಿ ಸುಬುಧೇಂದ್ರ ತೀರ್ಥರಿಗೆ ಕೈ ಮುಗಿದು ನಮಿಸಿದ ಪ್ರಧಾನಿ ಮೋದಿ

ಆಯೇಷಾ ಬಾನು
|

Updated on:May 06, 2023 | 1:29 PM

Share

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಭರ್ಜರಿ ರೋಡ್​ ಶೋ ನಡೆಸುತ್ತಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಮಂತ್ರಾಲಯ ಶ್ರೀಗಳತ್ತ ಕೈ ಮುಗಿದು ನಮಿಸಿದ್ದಾರೆ.

ಬೆಂಗಳೂರು: ಜೆಪಿ ನಗರದಿಂದ ಜಯನಗರದ ಕಡೆಗೆ ರೋಡ್​​ ಶೋ ಮೂಲಕ ಬರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳತ್ತ ತಮ್ಮ ಎರಡೂ ಕೈತೋಳುಗಳನ್ನು ಎತ್ತಿ ಒಂದೇ ಸಮನೆ ಕೈಬೀಸುತ್ತಾ ಸಾಗಿದರು. ಆದರೆ ಜಯನಗರ 6ನೇ ಬ್ಲಾಕ್​​ನಲ್ಲಿರುವ ರಾಯರ ಮಠದ ವೃತ್ತ ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ಬಳಿ ತಮ್ಮ ನಿರೀಕ್ಷೆಯಲ್ಲಿ ನಿಂತಿದ್ದ ಮಂತ್ರಾಲಯ ಮಠದ ಪೀಠಾಧಿಪತಿ ಡಾ. ಶ್ರೀ ಸುಬುಧೇಂದ್ರ ತೀರ್ಥರನ್ನು ಪ್ರಧಾನಿ ಮೋದಿ ಗಮನಿಸಿದರು. ತಕ್ಷಣವೇ ಕೈಬೀಸುವುದನ್ನು ನಿಲ್ಲಿಸಿ, ತಲೆಬಾಗಿ ಶ್ರೀ ಸುಬುಧೇಂದ್ರ ತೀರ್ಥರಿಗೆ ನಮಸ್ಕರಿಸಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರಿಗೆ ಶ್ರೀಗಳು ತಲೆಬಾಗಿ, ಕೈ ಮುಗಿದು ನಮಿಸಿದರು. ಇದನ್ನು ಕಂಡು, ಮೋದಿ ರೋಡ್ ಶೋ ವೀಕ್ಷಿಸಲು ಮಠದ ಹೊರ ಭಾಗದಲ್ಲಿ ನಿಂತಿದ್ದ ರಾಯಭಕ್ತರು ಈ ದೃಶ್ಯವನ್ನು ಕಂಡು ಪುಳುಕಿತರಾದರು.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ಭರ್ಜರಿ ರೋಡ್​ ಶೋ ನಡೆಸುತ್ತಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಮಂತ್ರಾಲಯ ಶ್ರೀಗಳತ್ತ ಕೈ ಮುಗಿದು ನಮಿಸಿದ್ದಾರೆ. ಪ್ರಧಾನಿ ಮೋದಿಯವರ ರೋಡ್​ ಶೋ ಬೆಂಗಳೂರಿನ ಜಯನಗರದ ಆರನೇ ಬ್ಲಾಕ್ ಬಳಿ ಇರುವ ರಾಯರ ಮಠದತ್ತ ಬರುತ್ತಿದ್ದಂತೆ ಮೋದಿಯವರು ಮಂತ್ರಾಲಯ ಶ್ರೀಗಳತ್ತ ಕೈ ಮುಗಿದು ನಮಿಸಿದ್ದಾರೆ. ಈ ವೇಳೆ ಶ್ರೀಗಳು ನಿಂತಲ್ಲಿಂದಲೇ ಆಶಿರ್ವದಿಸಿದ್ದಾರೆ. ಡಾ.ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಪೀಠಾಧಿಪತಿ ಮೋದಿ ರೋಡ್ ಶೋ ವೇಳೆ ಮಠದ ಹೊರ ಭಾಗದಲ್ಲಿ ನಿಂತು ರೋಡ್​ ಶೋ ವೀಕ್ಷಿಸಿದರು

Published on: May 06, 2023 01:16 PM