WITT Global Summit: ಟಿವಿ9 ನೆಟ್‌ವರ್ಕ್ ಕಾರ್ಯಕ್ಕೆ ನಮೋ ಮೆಚ್ಚುಗೆ
ಟಿವಿ9 ನೆಟ್‌ವರ್ಕ್ ನವದೆಹಲಿಯಲ್ಲಿ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡರು. ಈ ವೇಳೆ ಮಾತನಾಡಿದ ಮೋದಿ, ಮೊದಲಿಗೆ ಟಿವಿ9 ಸಂಸ್ಥೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ತಿಳಿಸಿದ್ರು.
ನವದೆಹಲಿ, (ಫೆಬ್ರವರಿ 26): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿವಿ9ನ WITTS ಶೃಂಗಸಭೆ ಸಭೆ ನಡೀತಿದೆ. 2ನೇ ದಿನವಾದ ಇಂದು(ಫೆಬ್ರವರಿ 26) ಪ್ರಧಾನಿ ನರೇಂದ್ರ ಮೋದಿ, ತಮ್ಮ ಅಮೂಲ್ಯ ಸಮಯವನ್ನ ಟಿವಿ9 ಶೃಂಗಸಭೆಗಾಗಿಯೇ ಮೀಸಲಿಟ್ಟಿದ್ರು. ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್ನಲ್ಲಿ ಪಾಲ್ಗೊಂಡಿದ್ದ ಮೋದಿ, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ಹೇಳಿದರು. ಟಿವಿ9 ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಟಿವಿ9ನ ಥೀಮ್ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.