WITT TV9 Global Summit 2024: 60 ವರ್ಷಗಳಲ್ಲಿ ಹೊತ್ತಿದ್ದ ಜಡತ್ವವನ್ನು ಕಳೆದೊಂದು ದಶಕದಲ್ಲಿ ತೊಡೆದು ಹಾಕಿದ್ದೇವೆ: ಆರ್ ಸಿ ಭಾರ್ಗವ, ಮಾರುತಿ ಸುಜುಕಿ ಚೇರ್ಮನ್

WITT TV9 Global Summit 2024: 60 ವರ್ಷಗಳಲ್ಲಿ ಹೊತ್ತಿದ್ದ ಜಡತ್ವವನ್ನು ಕಳೆದೊಂದು ದಶಕದಲ್ಲಿ ತೊಡೆದು ಹಾಕಿದ್ದೇವೆ: ಆರ್ ಸಿ ಭಾರ್ಗವ, ಮಾರುತಿ ಸುಜುಕಿ ಚೇರ್ಮನ್

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2024 | 7:23 PM

ವಿಶ್ವದಲ್ಲೇ ಭಾರತೀಯರು ಅತ್ಯಂತ ಬುದ್ಧಿವಂತರು, ಪರಿಶ್ರಮ ಜೀವಿಗಳು ಮತ್ತು ಅವರ ಬದ್ಧತೆ ಅಸಾಧರಣವಾದದ್ದು. ಅವರ ಬುದ್ಧಿವಂತಿಕೆ, ಪರಿಶ್ರಮಗಳಿಗೆ ಪೂರಕವಾಗಿ ನಾಡಿನ ಫಲವತ್ತಾದ ಭೂಮಿ ನೆರವು ನೀಡುತ್ತಿದೆ, ಬೇರೆ ಯಾವುದಾದರೂ ದೇಶದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುವುದನ್ನು ಕೇಳಿದ್ದೀರಾ ಎಂದು ಭಾರ್ಗವ ಹೇಳಿದರು.

ದೆಹಲಿ: ಟಿವಿ9 ನೆಟ್ವರ್ಕ್ ದೆಹಲಿಯಲ್ಲಿ ಆಯೋಜಿಸಿರುವ 3-ದಿನಗಳ ವ್ಹಾಟ್ ಇಂಡಿಯ ಥಿಂಕ್ಸ್ ಟುಡೇ (What India Thinks Today) ಜಾಗತಿಕ ಶೃಂಗಸಭೆಯ (Global Summit) ಎರಡನೇ ದಿನ ‘ಸಸ್ಟೇನಿಂಗ್ ದಿ ಮುಮೆಂಟ್ ಅಂಡ್ ದಿ ಮುಮೆಂಟಮ್’ ವಿಷಯದ ಮೇಲೆ ಮಾತಾಡಿದ ಮಾರುತಿ ಸುಜುಕಿ ಸಂಸ್ಥೆಯ ಚೇರ್ಮನ್ ಆರ್ ಸಿ ಭಾರ್ಗವ ( RC Bhargava) ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಮತ್ತು ಆಟೊಮೊಬೈಲ್ ಮಾರ್ಕೆಟ್ ನಲ್ಲಿ ಅಗಾಧವಾದ ಪರಿವರ್ತನೆಯಾಗಿದೆ ಎಂದು ಹೇಳಿದರು. ವಿಶ್ವದ ಎಲ್ಲ ರಾಷ್ಟ್ರಗಳ ಇಕಾನಮಿ ಸ್ಥಗಿತಗೊಂಡಿದ್ದರೂ ಭಾರತದ ಇಕಾನಮಿ ಚೇತೋಹಾರಿಯಾಗಿದೆ ಮತ್ತು ಪ್ರಗತಿ ಪಥದಲ್ಲಿದೆ. ಯಾಕೆಂದರೆ, ಭಾರತದಲ್ಲಿ ಉದ್ಯಮಗಳ ಬೆಳವಣಿಗೆಗೆ ವಿಪುಲವಾದ ಅವಕಾಶವಿದೆ ಮತ್ತು ಈ ಅವಕಾಶ ಇಲ್ಲಿನ ಜನರ ಶ್ರೇಷ್ಠ ವ್ಯಕ್ತಿತ್ವ, ಪರಿಶ್ರಮ, ಕ್ರಿಯಾಶೀಲತೆಯಿಂದ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.

ವಿಶ್ವದಲ್ಲೇ ಭಾರತೀಯರು ಅತ್ಯಂತ ಬುದ್ಧಿವಂತರು, ಪರಿಶ್ರಮ ಜೀವಿಗಳು ಮತ್ತು ಅವರ ಬದ್ಧತೆ ಅಸಾಧರಣವಾದದ್ದು. ಅವರ ಬುದ್ಧಿವಂತಿಕೆ, ಪರಿಶ್ರಮಗಳಿಗೆ ಪೂರಕವಾಗಿ ನಾಡಿನ ಫಲವತ್ತಾದ ಭೂಮಿ ನೆರವು ನೀಡುತ್ತಿದೆ, ಬೇರೆ ಯಾವುದಾದರೂ ದೇಶದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುವುದನ್ನು ಕೇಳಿದ್ದೀರಾ ಎಂದು ಭಾರ್ಗವ ಹೇಳಿದರು.

ಕಳೆದೊಂದು ದಶಕದಲ್ಲಿ ಭಾರತ ಭಾರೀ ಬದಲಾವಣೆಗಳನ್ನು ಕಂಡಿರುವುದಕ್ಕೆ ಕಾರಣವಿದೆ, 60 ವರ್ಷಗಳಿಂದ ನಮ್ಮಲ್ಲಿ ಮನೆ ಮಾಡಿದ್ದ ಜಡತ್ವ ಮತ್ತು ನಿರುಪಯುಕ್ತ ವ್ಯವಸ್ಥೆಯನ್ನು ತೊಡೆದು ಹಾಕಲಾಗಿದೆ. ಹಿಂದಿನ ಉದ್ಯಮಿಗಳು ಸಂಸ್ಥೆಯ ಏಳ್ಗೆ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲ, ತಮ್ಮ ಸಂಪತ್ತನ್ನು ವೃದ್ಧಿಸಿಕೊಳ್ಳುವೆಡೆ ಮಾತ್ರ ಅವರ ಗಮನ ಕೇಂದ್ರೀಕೃತವಾಗಿತ್ತು. ಆದರೆ ಈಗಿನ ಯುವಜನಾಂಗದ ಯೋಚನಾಧಾಟಿ ಭಿನ್ನವಾಗಿರುವುದರಿಂದ ದೇಶದ ಉದ್ಯಮಗಳ ಸನ್ನಿವೇಶ ಬದಲಾಗಿದೆ ಎಂದು ಭಾರ್ಗವ ಹೇಳಿದರು.

ತಮ್ಮ ಸಂಸ್ಥೆ ಮಾರುತಿಯಲ್ಲಿ ಆಂತರಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ಕಡೆ ಹೆಚ್ಚು ಒತ್ತು ನೀಡಲಾಗುತ್ತದೆ ಮತ್ತು ಅದೇ ಕಾರಣಕ್ಕೆ ಹಣಕಾಸಿನ ನೆರವಿಗಾಗಿ ತಾವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಬಳಿ ಹೋಗಲ್ಲ ಎಂದು ಭಾರ್ಗವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 26, 2024 07:51 PM