ಸಿನಿಮಾದಿಂದ ರಾಜಕೀಯದ ತನಕ: ಟಿವಿ9 ವೇದಿಕೆಯಲ್ಲಿ ಅನೇಕ ವಿಚಾರ ಹಂಚಿಕೊಂಡ ಕಂಗನಾ
ಟಿವಿ9 ನೆಟ್ವರ್ಕ್ ಆಯೋಜಿಸಿದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಸಂವಾದದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾಗಳ ವಿಚಾರದಿಂದ ಆರಂಭವಾಗಿ ಲೋಕಸಭಾ ಚುನಾವಣೆ ತನಕ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಕಂಗನಾ ಜೊತೆ ನಡೆದ ಸಂವಾದದ ವಿಡಿಯೋ ಇಲ್ಲಿದೆ..
ಜನಪ್ರಿಯ ನಟಿ ಕಂಗನಾ ರಣಾವತ್ (Kangana Ranaut) ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿದೆ. ಈ ಪ್ರಶ್ನೆಯನ್ನು ಇನ್ನಷ್ಟು ಬಲವಾಗಿಸುವ ರೀತಿಯಲ್ಲಿ ಕಂಗನಾ ರಣಾವತ್ ಅವರು ಒಂದು ದೊಡ್ಡ ಸುಳಿವು ನೀಡಿದ್ದಾರೆ. ತಾವು ರಾಜಕೀಯಕ್ಕೆ ಬರಲು ಇದು ಸರಿಯಾದ ಸಮಯ ಎಂದು ಅವರು ಹೇಳಿದ್ದಾರೆ. ಟಿವಿ9 ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಕಾನ್ಕ್ಲೇವ್ನಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ತಮ್ಮ ಸಿನಿಮಾ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಇಂದು ಭಾರತದ ಚಿತ್ರರಂಗ ಯಾವ ರೀತಿಯಲ್ಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಒಟಿಟಿ ಪ್ಲಾಟ್ಫಾರ್ಮ್ಗಳ ಬಗ್ಗೆಯೂ ಕಂಗನಾ ರಣಾವತ್ ಮಾತನಾಡಿದ್ದಾರೆ. ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದಲ್ಲಿ ತಮಗೆ ಸಿಕ್ಕ ಅವಕಾಶಗಳ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿ ಕೂಡ ಅವರು ಸಕ್ರಿಯರಾಗಿದ್ದಾರೆ. ಟಿವಿ9 ವೇದಿಕೆಯಲ್ಲಿ ಕಂಗನಾ ರಣಾವತ್ ಮಾತನಾಡಿದ ಪೂರ್ತಿ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.