WITT Global Summit: ಟಿವಿ9 ನೆಟ್​ವರ್ಕ್ ಕಾರ್ಯಕ್ಕೆ ನಮೋ ಮೆಚ್ಚುಗೆ

WITT Global Summit: ಟಿವಿ9 ನೆಟ್​ವರ್ಕ್ ಕಾರ್ಯಕ್ಕೆ ನಮೋ ಮೆಚ್ಚುಗೆ

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 26, 2024 | 11:16 PM

ಟಿವಿ9 ನೆಟ್‌ವರ್ಕ್ ನವದೆಹಲಿಯಲ್ಲಿ ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್‌ ಟುಡೇ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡರು. ಈ ವೇಳೆ ಮಾತನಾಡಿದ ಮೋದಿ, ಮೊದಲಿಗೆ ಟಿವಿ9 ಸಂಸ್ಥೆಯ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ತಿಳಿಸಿದ್ರು.

ನವದೆಹಲಿ, (ಫೆಬ್ರವರಿ 26): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿವಿ9ನ WITTS ಶೃಂಗಸಭೆ ಸಭೆ ನಡೀತಿದೆ. 2ನೇ ದಿನವಾದ ಇಂದು(ಫೆಬ್ರವರಿ 26) ಪ್ರಧಾನಿ ನರೇಂದ್ರ ಮೋದಿ, ತಮ್ಮ ಅಮೂಲ್ಯ ಸಮಯವನ್ನ ಟಿವಿ9 ಶೃಂಗಸಭೆಗಾಗಿಯೇ ಮೀಸಲಿಟ್ಟಿದ್ರು. ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್​ನಲ್ಲಿ ಪಾಲ್ಗೊಂಡಿದ್ದ ಮೋದಿ, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ಹೇಳಿದರು. ಟಿವಿ9 ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಟಿವಿ9ನ ಥೀಮ್ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.