ಕಂಗನಾ ಕುಟುಂಬದ ಆಸ್ತಿ ಖರೀದಿಸಿದ ಮೃಣಾಲ್​ ಠಾಕೂರ್​; ಇದಪ್ಪ ಬೆಳವಣಿಗೆ ಅಂದ್ರೆ

ಖ್ಯಾತ ನಟಿ ಮೃಣಾಲ್​ ಠಾಕೂರ್​ ಅವರು ಬರೋಬ್ಬರಿ 10 ಕೋಟಿ ರೂಪಾಯಿ ನೀಡಿ ಈ ಪ್ರಾಪರ್ಟಿ ಖರೀದಿಸಿದ್ದಾರೆ ಎಂದು ವರದಿ ಆಗಿದೆ. ಈ ಫ್ಲಾಟ್​ನಲ್ಲಿ ಸದ್ಯಕ್ಕೆ ಇಂಟೀರಿಯರ್​ ಡಿಸೈನ್​ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಹೊಸ ಅಪಾರ್ಟ್​ಮೆಂಟ್​ಗೆ ಅವರು ಶಿಫ್ಟ್​ ಆಗಲಿದ್ದಾರೆ. ಕಂಗನಾ ರಣಾವತ್​ ಅವರ ಕುಟುಂಬಕ್ಕೆ ಸೇರಿದ ಪ್ರಾಪರ್ಟಿ ಈಗ ಮೃಣಾಲ್​ ಠಾಕೂರ್​ ಅವರ ಪಾಲಾಗಿದೆ.

ಕಂಗನಾ ಕುಟುಂಬದ ಆಸ್ತಿ ಖರೀದಿಸಿದ ಮೃಣಾಲ್​ ಠಾಕೂರ್​; ಇದಪ್ಪ ಬೆಳವಣಿಗೆ ಅಂದ್ರೆ
ಕಂಗನಾ ರಣಾವತ್​, ಮೃಣಾಲ್​ ಠಾಕೂರ್​
Follow us
ಮದನ್​ ಕುಮಾರ್​
|

Updated on: Feb 21, 2024 | 6:42 AM

ನಟಿ ಮೃಣಾಲ್​ ಠಾಕೂರ್​ (Mrunal Thakur) ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಬಾಲಿವುಡ್​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಸೂಪರ್​ ಸ್ಟಾರ್​ ಆಗಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿ ಬದಲಾಗುತ್ತಿದೆ. ಈಗ ಅವರು ಮುಂಬೈನ ದುಬಾರಿ ಏರಿಯಾಗಳಲ್ಲಿ ಆಸ್ತಿ ಖರೀದಿ (Mrunal Thakur Property) ಮಾಡುತ್ತಿದ್ದಾರೆ. ಬಹುಕೋಟಿ ರೂಪಾಯಿ ಮೊತ್ತದ ಫ್ಲ್ಯಾಟ್​ ಕೊಂಡುಕೊಳ್ಳುವ ಮೂಲಕ ಮೃಣಾಲ್​ ಠಾಕೂರ್​ ಸುದ್ದಿ ಆಗಿದ್ದಾರೆ. ಅಚ್ಚರಿ ಏನೆಂದರೆ, ಈಗ ಅವರು ಖರೀದಿ ಮಾಡಿರುವುದು ಕಂಗನಾ ರಣಾವತ್​ (Kangana Ranaut) ಕುಟುಂಬಕ್ಕೆ ಸೇರಿದ ಪ್ರಾಪರ್ಟಿ! ಈ ಸುದ್ದಿ ಕೇಳಿದ ಮೃಣಾಲ್​ ಠಾಕೂರ್​ ಅಭಿಮಾನಿಗಳು ‘ವಾವ್​.. ಇದಪ್ಪ ಬೆಳವಣಿಗೆ ಅಂದ್ರೆ’ ಎಂದು ಹೊಗಳುತ್ತಿದ್ದಾರೆ.

ಮುಂಬೈನ ಅಂದೇರಿಯಲ್ಲಿ ಕಂಗನಾ ರಣಾವತ್​ ಅವರ ತಂದೆ ಅಮರ್​ದೀಪ್​ ರಣಾವತ್​ ಒಡೆತನದಲ್ಲಿ ಇದ್ದ ಎರಡು ಫ್ಲಾಟ್​ಗಳನ್ನು ಮೃಣಾಲ್​ ಠಾಕೂರ್​ ಖರೀದಿ ಮಾಡಿದ್ದಾರೆ. ಇದರ ಬೆಲೆ ಅಂದಾಜು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೃಣಾಲ್​ ಠಾಕೂರ್​ ಅವರು ಶೀಘ್ರದಲ್ಲೇ ಈ ಅಪಾರ್ಟ್​ಮೆಂಟ್​ಗೆ ಶಿಫ್ಟ್​ ಆಗಲಿದ್ದಾರೆ. ಸದ್ಯಕ್ಕೆ ಇಂಟೀರಿಯರ್​ ಡಿಸೈನ್​ ಕೆಲಸಗಳು ನಡೆಯುತ್ತಿವೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸೀತಾ ಮಹಾಲಕ್ಷ್ಮಿಯ ನೆನಪಿನಲ್ಲಿ ರಾಮ್​; ಹೇಗಿದೆ ಮೃಣಾಲ್​ ಠಾಕೂರ್​-ದುಲ್ಕರ್​ ಸಲ್ಮಾನ್​ ನಡುವಿನ ಬಾಂಧವ್ಯ?

ಮೃಣಾಲ್​ ಠಾಕೂರ್​ ಅವರು ಬಣ್ಣದ ಬದುಕು ಆರಂಭಿಸಿದ್ದು ಹಿಂದಿ ಕಿರುತೆರೆಯಿಂದ. ಬಳಿಕ ಅವರಿಗೆ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಚಾನ್ಸ್​ ಸಿಕ್ಕಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ ಅವರಿಗೆ ದಕ್ಷಿಣ ಭಾರತದಿಂದಲೂ ಆಫರ್​ ಸಿಗಲಾರಂಭಿಸಿತು. ಈಗ ಮೃಣಾಲ್​ ಠಾಕೂರ್​ ಅವರ ಕೈ ತುಂಬ ಸಿನಿಮಾಗಳಿವೆ. ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ.

ಇದನ್ನೂ ಓದಿ: ‘ಸೀತಾ ರಾಮಂ’ ಸುಂದರಿ ಮೃಣಾಲ್​ ಠಾಕೂರ್​ ಜೊತೆ ಬಾದ್​ಷಾ ಪ್ರೀತಿ-ಪ್ರೇಮ? ಸಿಕ್ತು ಸ್ಪಷ್ಟನೆ

ಹಿಂದಿಯಲ್ಲಿ ‘ಸೂಪರ್​ 30’, ‘ಬಾಟ್ಲಾ ಹೌಸ್​’, ‘ತೂಫಾನ್​’, ‘ಜರ್ಸಿ’, ‘ಲಸ್ಟ್​ ಸ್ಟೋರೀಸ್​ 2’ ಮುಂತಾದ ಸಿನಿಮಾಗಳಲ್ಲಿ ಮೃಣಾಲ್​ ಠಾಕೂರ್​ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಸೀತಾ ರಾಮಂ’ ಸೂಪರ್​ ಹಿಟ್​ ಆಯಿತು. ಆ ಸಿನಿಮಾದಲ್ಲಿ ಮೃಣಾಲ್​ ಠಾಕೂರ್​ ಮಾಡಿದ ಸೀತಾ ಮಹಾಲಕ್ಷ್ಮೀ ಅಲಿಯಾಸ್​ ಪ್ರಿನ್ಸೆಸ್​ ನೂರ್​ ಜಹಾನ್​ ಪಾತ್ರ ಜನಮೆಚ್ಚುಗೆ ಪಡೆಯಿತು. 2023ರಲ್ಲಿ ತೆರೆಕಂಡ ‘ಹಾಯ್​ ನಾನ್ನ’ ಚಿತ್ರ ಕೂಡ ಹಿಟ್​ ಆಯಿತು. ಈಗ ಅವರು ವಿಜಯ್​ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಸದ್ಯಕ್ಕೆ ಅವರನ್ನು ಒಂದು ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ