ಸೀತಾ ಮಹಾಲಕ್ಷ್ಮಿಯ ನೆನಪಿನಲ್ಲಿ ರಾಮ್​; ಹೇಗಿದೆ ಮೃಣಾಲ್​ ಠಾಕೂರ್​-ದುಲ್ಕರ್​ ಸಲ್ಮಾನ್​ ನಡುವಿನ ಬಾಂಧವ್ಯ?

Mrunal Thakur Birthday: ‘ಸೀತಾ ರಾಮಂ’ ಚಿತ್ರದಲ್ಲಿ ದುಲ್ಕರ್​ ಸಲ್ಮಾನ್​ ಮತ್ತು ಮೃಣಾಲ್​ ಠಾಕೂರ್​ ನಡುವಿನ ಕಾಂಬಿನೇಷನ್​ ನೋಡಿ ಜನರು ಫಿದಾ ಆದರು. ರಿಯಲ್​ ಲೈಫ್​ನಲ್ಲಿಯೂ ಇಬ್ಬರ ನಡುವೆ ಬಾಂಧವ್ಯ ಇದೆ.

ಸೀತಾ ಮಹಾಲಕ್ಷ್ಮಿಯ ನೆನಪಿನಲ್ಲಿ ರಾಮ್​; ಹೇಗಿದೆ ಮೃಣಾಲ್​ ಠಾಕೂರ್​-ದುಲ್ಕರ್​ ಸಲ್ಮಾನ್​ ನಡುವಿನ ಬಾಂಧವ್ಯ?
ದುಲ್ಕರ್​ ಸಲ್ಮಾನ್​, ಮೃಣಾಲ್​ ಠಾಕೂರ್​
Follow us
ಮದನ್​ ಕುಮಾರ್​
|

Updated on: Aug 01, 2023 | 7:10 PM

ಖ್ಯಾತ ನಟಿ ಮೃಣಾಲ್​ ಠಾಕೂರ್ (Mrunal Thakur)​ ಅವರು ಇಂದು (ಆಗಸ್ಟ್​ 1) ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಫೇಮಸ್​ ಆಗಿರುವ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮೃಣಾಲ್​ ಠಾಕೂರ್​ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆ ಪೈಕಿ ಹೆಚ್ಚು ಗಮನ ಸೆಳೆದಿರುವುದು ನಟ ದುಲ್ಕರ್​ ಸಲ್ಮಾನ್​ ಅವರ ವಿಶ್​. ‘ಸೀತಾ ರಾಮಂ’ (Sita Ramam) ಸಿನಿಮಾದಲ್ಲಿ ಮೃಣಾಲ್​ ಠಾಕೂರ್​ ಮತ್ತು ದುಲ್ಕರ್​ ಸಲ್ಮಾನ್​ ಅವರು ಜೋಡಿಯಾಗಿ ನಟಿಸಿದ್ದರು. ಆ ಚಿತ್ರದ ಬಳಿಕ ಇಬ್ಬರ ನಡುವೆ ಸ್ನೇಹ ಹೆಚ್ಚಾಯಿತು. ಇಂದು ಮೃಣಾಲ್​ ಠಾಕೂರ್​ ಅವರ ಜನ್ಮದಿನದ ಪ್ರಯುಕ್ತ ದುಲ್ಕರ್​ ಸಲ್ಮಾನ್​ (Dulquer Salmaan) ವಿಶೇಷವಾಗಿ ವಿಶ್​ ಮಾಡಿದ್ದಾರೆ.

‘ಸೀತಾ ರಾಮಂ’ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಒಟಿಟಿಯಲ್ಲಿ ಬಿಡುಗಡೆ ಆದಾಗಲೂ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಆ ಸಿನಿಮಾದಲ್ಲಿ ಮೃಣಾಲ್​ ಠಾಕೂರ್​ ಅವರು ಸೀತಾ ಮಹಾಲಕ್ಷ್ಮಿ ಅಲಿಯಾಸ್​ ಪ್ರಿನ್ಸಸ್​ ನೂರ್​ ಜಹಾನ್​ ಎಂಬ ಪಾತ್ರ ಮಾಡಿದರು. ರಾಮ್​ ಎಂಬ ಸೈನಿಕನ ಪಾತ್ರದಲ್ಲಿ ದುಲ್ಕರ್​ ಸಲ್ಮಾನ್​ ಕಾಣಿಸಿಕೊಂಡರು. ಇಬ್ಬರ ಕಾಂಬಿನೇಷನ್​ ನೋಡಿ ಜನರು ಫಿದಾ ಆದರು. ರಿಯಲ್​ ಲೈಫ್​ನಲ್ಲಿಯೂ ದುಲ್ಕರ್​ ಸಲ್ಮಾನ್​ ಮತ್ತು ಮೃಣಾಲ್​ ಠಾಕೂರ್​ ಅವರ ನಡುವೆ ಬಾಂಧವ್ಯ ಇದೆ.

ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಮನಸ್ಸಲ್ಲಿ ಹೇಳಿಕೊಳ್ಳಲಾಗದ ಸಂಕಟ; ಕಣ್ಣೀರು ಹಾಕುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಡಿಲೀಟ್ ಮಾಡಿದ ನಟ  

‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಈ ವರ್ಷ ನಿಮಗೆ ಅದ್ಭುತವಾಗಿತ್ತು ಎಂದು ಭಾವಿಸಿದ್ದೇನೆ. ನಿಮ್ಮ ಎಲ್ಲ ಸಿನಿಮಾಗಳನ್ನು ನೋಡಲು ಕಾದಿದ್ದೇನೆ. ನೀವು ಇಲ್ಲದೇ ಇದ್ದಿದ್ದರೆ ಸೀತಾ ರಾಮಂ ಸಿನಿಮಾ ಮತ್ತು ಅದರ ಅನುಭವ ಈ ರೀತಿಯಾಗಿ ಇರುತ್ತಿರಲಿಲ್ಲ. ನಮ್ಮ ನಡುವೆ ಇರುವ ಶ್ರೇಷ್ಠವಾದ ಸ್ನೇಹ ಮತ್ತು ನೆನಪುಗಳಿಗಾಗಿ ಧನ್ಯವಾದಗಳು’ ಎಂದು ದುಲ್ಕರ್​ ಸಲ್ಮಾನ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಮೃಣಾಲ್​ ಠಾಕೂರ್​ಗೆ ಜನ್ಮದಿನದ ಶುಭ ಕೋರಿದ್ದಾರೆ.

ಇದನ್ನೂ ಓದಿ: Dulquer Salmaan: ದುಲ್ಕರ್​ ಸಲ್ಮಾನ್​ ಬಗ್ಗೆ ಬಂದಿತ್ತು ಕೆಟ್ಟ ವಿಮರ್ಶೆ; ‘ಸೀತಾ ರಾಮಂ’ ನಟನ ಆ ನೋವಿನ ದಿನಗಳು ಹೇಗಿತ್ತು?

ಹಿಂದಿ ಕಿರುತೆರೆಯಿಂದ ಬಂದು, ನಂತರ ಬಾಲಿವುಡ್​ನಲ್ಲೂ ಮಿಂಚಿದ ಮೃಣಾಲ್​ ಠಾಕೂರ್​ ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ‘ಸೀತಾ ರಾಮಂ’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ದಕ್ಷಿಣ ಭಾರತದಲ್ಲಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ನಾನಿ ನಟನೆಯ ‘ಹಾಯ್​ ನಾನ್ನ’ ಮತ್ತು ವಿಜಯ್​ ದೇವರಕೊಂಡ ನಟನೆಯ ಹೊಸ ಸಿನಿಮಾಗೆ ಮೃಣಾಲ್​ ಠಾಕೂರ್​ ಅವರು ನಾಯಕಿ ಆಗಿದ್ದಾರೆ. ಇನ್ನೂ ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ವರ್ಷ ಅವರು ನಟಿಸಿದ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್