‘ಉಗ್ರಾವತಾರ’ದಲ್ಲಿ ಸಿದ್ದಿ ಹಾಡುಗಾರರಿಂದ ವಿಶೇಷ ಹಾಡು; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?

Ugravatara Movie: ‘ಉಗ್ರಾವತಾರ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ವಿಶೇಷ ಹಾಡೊಂದನ್ನು ಪ್ಲಾನ್ ಮಾಡಲಾಗಿದೆ. ಈ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.

TV9kannada Web Team

| Edited By: shivaprasad.hs

Jan 18, 2022 | 9:54 AM

ಸಿದ್ದಿ ಹಾಡುಗಾರರ ಜತೆ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಕುರಿತು ಟಿವಿ9 ಜತೆ ಮಾತನಾಡಿರುವ ಅವರು, ನಮ್ಮ ನಿರ್ದೇಶಕರಿಗೆ ‘ಸಲಗ’ ಚಿತ್ರದ ಹಾಡು ಇಷ್ಟವಾಗಿತ್ತು. ನಮ್ಮ ಚಿತ್ರಕ್ಕೂ ಅಂತಹ ಹಾಡು ಬೇಕಾಗಿತ್ತು. ‘ಉಗ್ರಾವತಾರ’ದಲ್ಲಿ ನನ್ನ ಪಾತ್ರದ ಹೆಸರು ಶ್ರೀ ದುರ್ಗಿ ಎಂದು. ಆ ಹಿನ್ನೆಲೆಯಲ್ಲಿ ಹಾಡು ರಚಿಸಲಾಗಿದೆ. ಆ ಹಾಡಿನ ಚಿತ್ರೀಕರಣದಲ್ಲಿ ಹೆಜ್ಜೆ ಹಾಕಲಿದ್ದು, ಆ ದಿನಕ್ಕೆ ಬಹಳ ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ.

ಪ್ರಮೋಷನಲ್​ ಹಾಡನ್ನು ಗಿರಿಜಾ ಸಿದ್ದಿ ಅವರೇ ಬರೆದಿದ್ದು, ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕೊಂಕಣಿ, ಉರ್ದು ಹಾಗೂ ಕನ್ನಡ ಸಾಹಿತ್ಯವನ್ನು ಈ ಹಾಡು ಹೊಂದಿದೆ. ಚಿತ್ರಕ್ಕೆ ಗುರುಮೂರ್ತಿ ನಿರ್ದೇಶನ ಮಾಡಿದ್ದು, ತಾರಾಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮೊದಲಾದವರು ಕಾಣಿಸಿಕೊಂದಿದ್ದಾರೆ. ನಂದಕುಮಾರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದು, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋಧ್-ಮಾಸ್‌ ಮಾದ- ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್​ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್​ ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ.

ವಿಶೇಷ ಹಾಡಿನ ತುಣುಕು ಇಲ್ಲಿದೆ:

ಇದನ್ನೂ ಓದಿ:

ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್​; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್

ರ‍್ಯಾಗಿಂಗ್‌ ಮಾಡುತ್ತಿದ್ದ ಹುಡುಗರಿಗೆ ಬೆಂಡೆತ್ತಿದ ಪ್ರಿಯಾಂಕಾ ಉಪೇಂದ್ರ; ಭರದಿಂದ ಸಾಗುತ್ತಿದೆ ‘ಉಗ್ರಾವತಾರ’ ಚಿತ್ರೀಕರಣ

Follow us on

Click on your DTH Provider to Add TV9 Kannada