ಊಟಿಯಲ್ಲಿ ದೆವ್ವದ ಅನುಭವ ಆಗಿದೆ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
‘ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಬಂದಿದ್ದಾರೆ. ಈ ವೇಳೆ ಅವರಿಗೆ ‘ನೀವೇನಾದರೂ ದೆವ್ವ ನೋಡಿದ್ದೀರಾ’ ಅಂತ ಸೃಜನ್ ಲೋಕೇಶ್ ಕೇಳಿದರು. ‘ನಿಮಗೂ ಈ ದೆವ್ವದ ಪಿಕ್ಚರ್ಗೂ ಏನು ಸಂಬಂಧ? ರಿಯಲ್ ಆಗಿ ದೆವ್ವ ನೋಡಿದ್ದೀರಾ’ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ ಅವರು ಹೀಗೆ ಉತ್ತರಿಸಿದರು. ವಿಡಿಯೋ ಇಲ್ಲಿದೆ ನೋಡಿ..
ನಟಿ ಪ್ರಿಯಾಂಕಾ ಉಪೇಂದ್ರ ಅವರು ‘ಮಜಾ ಟಾಕೀಸ್’ (Maja Talkies) ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ವೇಳೆ ಅವರಿಗೆ ದೆವ್ವ ನೋಡಿದ್ದೀರಾ ಎಂದು ಸೃಜನ್ ಲೋಕೇಶ್ ಪ್ರಶ್ನೆ ಕೇಳಿದರು. ‘ನಿಮಗೂ ಈ ದೆವ್ವದ ಪಿಕ್ಚರ್ಗೂ ಏನು ಸಂಬಂಧ? ನಿಜ ಜೀವನದಲ್ಲಿ ದೆವ್ವ ನೋಡಿದ್ದೀರಾ’ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ ಉಪೇಂದ್ರ (Priyanka Upendra) ಈ ರೀತಿ ಉತ್ತರಿಸಿದರು. ‘ನಾನು ದೆವ್ವ ನೋಡಿಲ್ಲ. ಆದರೆ ಅನುಭವಿಸಿದ್ದೀನಿ. ಊಟಿಯಲ್ಲಿ ಒಮ್ಮೆ ಆ ರೀತಿ ಆಗಿತ್ತು. ನೆರಳಿನ ಆಕೃತಿ ಥರ’ ಎಂದು ಪ್ರಿಯಾಂಕಾ ಹೇಳಿದರು. ನಂತರ ಅವರು ಹೇಳಿದ ಮಾತು ತುಂಬ ತಮಾಷೆಯಾಗಿತ್ತು. ‘ಆಮೇಲೆ ನಿಮ್ಮ ಮನೆಯಲ್ಲಿ ನೀವು ಒಮ್ಮೊಮ್ಮೆ ಮೇಕಪ್ ಇಲ್ಲದೇ ಬಂದು ಬಿಡುತ್ತೀರಿ’ ಎಂದು ಪ್ರಿಯಾಂಕಾ ಹೇಳಿದ್ದು ಕೇಳಿ ಸೃಜನ್ ಲೋಕೇಶ್ (Srujan Lokesh) ಅಚ್ಚರಿಯಿಂದ ನೋಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

