‘ಕಾಲು ಕೆರೆದುಕೊಂಡು ಬಂದ್ರೆ ತಮಿಳು ಸಿನಿಮಾ ಬ್ಯಾನ್​ ಮಾಡ್ತೀವಿ’: ವಾಟಾಳ್​ ನಾಗರಾಜ್​ ಎಚ್ಚರಿಕೆ

| Updated By: ಮದನ್​ ಕುಮಾರ್​

Updated on: Jan 19, 2022 | 3:49 PM

‘ತಮಿಳುನಾಡು ಗಡಿ ಬಂದ್​ ಮಾಡುತ್ತೇವೆ. ಒಂದು ವಾಹನವನ್ನೂ ಒಳಗಡೆ ಬಿಡೋದಿಲ್ಲ. ತಮಿಳು ಚಿತ್ರಗಳನ್ನು ಬಂದ್​ ಮಾಡುತ್ತೇವೆ’ ಎಂದು ವಾಟಾಳ್​ ನಾಗರಾಜ್​ ಗುಡುಗಿದ್ದಾರೆ.

ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು (Tamil Nadu) ನಡುವೆ ಇರುವ ಕಿರಿಕ್​ ಇಂದು-ನಿನ್ನೆಯದಲ್ಲ. ಎಷ್ಟೇ ಹೋರಾಟ ಮಾಡಿದರೂ ಅದಕ್ಕೊಂದು ಶಾಶ್ವತ ಪರಿಹಾರ ಸಿಗುತ್ತಿಲ್ಲ. ಮೇಕೆದಾಟು (Mekedatu) ಯೋಜನೆ ಜಾರಿ ಆಗಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ (Vatal Nagaraj) ಅವರು ತಮಿಳುನಾಡಿಗೆ ಎಚ್ಚರಿಕೆ ನೀಡಿದ್ದಾರೆ. ‘ಬರೀ ಪಾದಯಾತ್ರೆ ಮಾಡಿದ್ರೆ ಸಾಧ್ಯವಿಲ್ಲ. ತಮಿಳುನಾಡಿಗೆ ಅಂತಿಮವಾಗಿ ಎಚ್ಚರಿಕೆ ಕೊಡುತ್ತೇನೆ. ನೀವೇನಾದ್ರೂ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ, ಇಡೀ ಕರ್ನಾಟಕದ ಉದ್ದಗಲಕ್ಕೂ ತಮಿಳುನಾಡು ಗಡಿ ಬಂದ್​ ಮಾಡುತ್ತೇವೆ. ಒಂದು ವಾಹನವನ್ನೂ ಒಳಗಡೆ ಬಿಡೋದಿಲ್ಲ. ತಮಿಳು ಚಿತ್ರಗಳನ್ನು ಬಂದ್​ ಮಾಡುತ್ತೇವೆ. ನಿಮ್ಮ ವಿರುದ್ಧ ಇಲ್ಲಿ ಸತ್ಯಾಗ್ರಹದ ಮೂಲಕ ಗಡಿನಾಡು ಚಳುವಳಿಯನ್ನು ಮಾಡುತ್ತಿದ್ದೇವೆ’ ಎಂದು ವಾಟಾಳ್​ ನಾಗರಾಜ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

‘ಈ ಜಾಥಾದ ಚಿತ್ರಕಥೆ ಸರಿಯಿಲ್ಲ; ಕಥೆಯೇ ಫ್ಲಾಪ್​’: ಮೇಕೆದಾಟು ಪಾದಯಾತ್ರೆ ಬಗ್ಗೆ ನಟಿ ಶ್ರುತಿ ಖಂಡನೆ