ಕೆನಡಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್

Updated on: Apr 29, 2025 | 7:38 PM

ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಖಲಿಸ್ತಾನ್ ಪರ ವ್ಯಕ್ತಿ ಮತ್ತು ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಜಗ್ಮೀತ್ ಸಿಂಗ್ ಎನ್‌ಡಿಪಿ ಚುನಾವಣಾ ಪಾರ್ಟಿಯಲ್ಲಿ ತಮ್ಮ ಬೆಂಬಲಿಗರು ಮತ್ತು ಅವರ ಕುಟುಂಬಕ್ಕೆ ಧನ್ಯವಾದ ಹೇಳಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸುತ್ತಾ ಜಗ್ಮೀತ್ ಸಿಂಗ್ ಎನ್‌ಡಿಪಿಯ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡುತ್ತಾ ಭಾವುಕರಾದರು. ತಮ್ಮ ಸ್ಥಾನಕ್ಕೆ ಮಧ್ಯಂತರ ನಾಯಕ ಬಂದ ತಕ್ಷಣ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ಜಗ್ಮೀತ್ ಸಿಂಗ್ ಘೋಷಿಸಿದ್ದರು.

ಒಟ್ಟಾವಾ, ಏಪ್ರಿಲ್ 29: ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ ಪಕ್ಷವು ಕೆನಡಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ನಾಯಕ ಹಾಗೂ ಖಲಿಸ್ತಾನ್ ಪರ ವ್ಯಕ್ತಿಯಾಗಿರುವ ಜಗ್ಮೀತ್ ಸಿಂಗ್ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಸೋಲಿನ ಬಳಿಕ ರಾಜೀನಾಮೆ ನೀಡಿ ಮಾತನಾಡಿದ ಜಗ್ಮೀತ್ ಸಿಂಗ್ ವೇದಿಕೆಯಲ್ಲೇ ಭಾವುಕರಾಗಿದ್ದಾರೆ. “ನನ್ನ ಕುಟುಂಬಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಹಾಗೇ, ನೀವು ಎಷ್ಟು ಶ್ರಮಿಸಿದ್ದೀರಿ ಎಂದು ನನಗೆ ತಿಳಿದಿದೆ. ನಾನು ನಿಮ್ಮೊಂದಿಗೆ ಸಮಯ ಕಳೆದಿದ್ದೇನೆ. ನೀವು ಅದ್ಭುತ. ಖಲಿಸ್ತಾನಿ ಸಮುದಾಯಗಳನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ತುಂಬಾ ವಿಷಾದವಿದೆ” ಎಂದು ಅವರು ಹೇಳಿದ್ದಾರೆ.

“ನಾವು ಕೆಲವೊಮ್ಮೆ ಸೋಲಬಹುದು, ಆ ಸೋಲು ಬಹಳ ನೋವುಂಟುಮಾಡುತ್ತವೆ” ಎಂದು ಹೇಳುತ್ತಾ ಜಗ್ಮೀತ್ ಸಿಂಗ್ ಭಾವುಕರಾದರು. ಎನ್‌ಡಿಪಿ ಚುನಾವಣೆಯಲ್ಲಿ ಭರ್ಜರಿ ಸೋಲಿನ ನಂತರ ಈ ಭಾಷಣ ನಡೆಯಿತು. ತಮ್ಮ ಸ್ಥಾನಕ್ಕೆ ಮಧ್ಯಂತರ ನಾಯಕ ಬಂದ ತಕ್ಷಣ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ಜಗ್ಮೀತ್ ಸಿಂಗ್ ಘೋಷಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ