ಅಧಿಕೃತ ಎಫ್ ಎಸ್ ಎಲ್ ವರದಿ ಆಧಾರದ ಮೇಲೆ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಲಾಗಿದೆ: ಜಿ ಪರಮೇಶ್ವರ್

|

Updated on: Mar 05, 2024 | 12:35 PM

ಘಟನೆ ಜರುಗಿದಾಗಿನಿಂದ ಸರ್ಕಾರವು ಎಫ್ ಎಸ್ ಎಲ್ ವರದಿ ಬಂದ ಬಳಿಕ ಕ್ರಮ ಜರುಗಿಸುವುದಾಗಿ ಹೇಳಿತ್ತು ಮತ್ತು ಮಾಧ್ಯಮದವರೂ ಪದೇಪದೆ ವರದಿ ಬಗ್ಗೆ ವಿಚಾರಿಸುತ್ತಿದ್ದರು ಎಂದ ಪರಮೇಶ್ವರ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢಪಟ್ಟ ಕೂಡಲೇ ಪೊಲೀಸರು ಮೂವರನ್ನು ಬಂಧಿಸಿ ಮ್ಯಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಮತ್ತು ನ್ಯಾಯಾಲಯದ ಅನುಮತಿ ಮೇರೆಗೆ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದರು.

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ (pro Pakistan slogan) ಕೂಗಿದವರನ್ನು ಎಫ್ ಎಸ್ ಎಲ್ ವರದಿ (FSL report) ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿರೋಧ ಪಕ್ಷದವರ ಹೇಳುವ ಕಾರಣಕ್ಕೆ ಯಾರನ್ನೂ ಬಂಧಿಸಲಾಗಲ್ಲ, ಘಟನೆ ಜರುಗಿದಾಗಿನಿಂದ ಸರ್ಕಾರವು ಎಫ್ ಎಸ್ ಎಲ್ ವರದಿ ಬಂದ ಬಳಿಕ ಕ್ರಮ ಜರುಗಿಸುವುದಾಗಿ ಹೇಳಿತ್ತು ಮತ್ತು ಮಾಧ್ಯಮದವರೂ ಪದೇಪದೆ ವರದಿ ಬಗ್ಗೆ ವಿಚಾರಿಸುತ್ತಿದ್ದರು ಎಂದ ಅವರು ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢಪಟ್ಟ ಕೂಡಲೇ ಪೊಲೀಸರು ಮೂವರನ್ನು ಬಂಧಿಸಿ ಮ್ಯಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಮತ್ತು ನ್ಯಾಯಾಲಯದ ಅನುಮತಿ ಮೇರೆಗೆ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಪರಮೇಶ್ವರ್, ಯಾವುದೋ ಒಂದು ಖಾಸಗಿ ಎಫ್ ಎಸ್ ಎಲ್ ವಿಡಿಯೋ ಪರೀಕ್ಷಣೆ ನಡೆಸಿ ಪಾಕ್ ಪರ ಘೋಷಣೆ ಕೂಗಿದ್ದನ್ನು ದೃಢಪಡಿಸಿತ್ತು. ಆದರೆ ಸರ್ಕಾರ ಅದನ್ನು ಅಧಿಕೃತ ಎಂದು ಪರಿಗಣಿಸುವುದಿಲ್ಲ, ಆ ಸಂಸ್ಥೆಯು ಸರ್ಕಾರದಿಂದ ಸರ್ಟಿಫೈಡ್ ಆಗಿರುವುದಿಲ್ಲ. ಸರ್ಕಾರದಿಂದ ಸರ್ಟಿಫೈ ಆಗಿರುವ ಸಂಸ್ಥೆಯ ವರದಿಯನ್ನು ಮಾತ್ರ ಅಧಿಕೃತವೆಂದು ಪರಿಗಣಿಸಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿಯ ಖಾಸಗಿ ಎಫ್​ಎಸ್​ಎಲ್​ ವರದಿ ಗಣನೆಗೆ ತೆಗೆದುಕೊಳ್ಳಲ್ಲ : ಜಿ ಪರಮೇಶ್ವರ್​​

Follow us on