‘ವ್ಯಕ್ತಿ ಪೂಜೆ ಬೇಡ, ಸಿನಿಮಾಗೆ ಮರ್ಯಾದೆ ಕೊಡಿ’: ವೇದಿಕೆ ಮೇಲೆ ಖಡಕ್​ ಮಾತಾಡಿದ ಉಮಾಪತಿ

| Updated By: ಮದನ್​ ಕುಮಾರ್​

Updated on: Jul 20, 2022 | 1:10 PM

Umapathy Srinivas Gowda: ‘ಒಬ್ಬ ವ್ಯಕ್ತಿಯನ್ನು ಪೂಜೆ ಮಾಡಿದರೆ ಆ ವ್ಯಕ್ತಿ ಸ್ಟಾರ್ ಆಗಿರುವವರೆಗೆ ಮಾತ್ರ ನೀವು ಇರುತ್ತೀರಿ. ಅದಾದ ನಂತರ ನೀವೂ ತೆರೆ ಮರೆಗೆ ಸರಿಯುತ್ತೀರಿ’ ಎಂದು ಉಮಾಪತಿ ಶ್ರೀನಿವಾಸ್​ ಗೌಡ ಹೇಳಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ (Umapathy Srinivas Gowda) ಅವರು ನೇರ ನಡೆ-ನುಡಿಯ ವ್ಯಕ್ತಿ. ಚಿತ್ರರಂಗದಲ್ಲಿ ನಿರ್ಮಾಪಕರ ಕಷ್ಟಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಮದಗಜ’ (Madhagaja), ‘ರಾಬರ್ಟ್​’ ಸಿನಿಮಾಗಳನ್ನು ನಿರ್ಮಿಸಿದ ಅನುಭವ ಉಮಾಪತಿ ಅವರಿಗೆ ಇದೆ. ಸುದ್ದಿಗೋಷ್ಠಿಯೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು ಕನ್ನಡ ಚಿತ್ರರಂಗದ (Kannada Film Industry) ಕುರಿತು  ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ವ್ಯಕ್ತಿ ಪೂಜೆ ಬೇಡ, ಸಿನಿಮಾಗೆ ಮರ್ಯಾದೆ ಕೊಡಿ’ ಎಂದು ಅವರು ಖಡಕ್​ ಆಗಿ ಹೇಳಿದ್ದಾರೆ. ‘ಒಬ್ಬ ವ್ಯಕ್ತಿಯನ್ನು ಪೂಜೆ ಮಾಡಿದರೆ ಆ ವ್ಯಕ್ತಿ ಸ್ಟಾರ್ ಆಗಿರುವವರೆಗೆ ಮಾತ್ರ ನೀವು ಇರುತ್ತೀರಿ. ಅದಾದ ನಂತರ ನೀವೂ ತೆರೆ ಮರೆಗೆ ಸರಿಯುತ್ತೀರಿ. ಅದರ ಬದಲು ಸಿನಿಮಾವನ್ನು ಆರಾಧಿಸಿ’ ಎಂದು ಕಿವಿಮಾತು ಹೇಳಿದ್ದಾರೆ.

Published on: Jul 20, 2022 01:10 PM