United We Stand: ವಿರೋಧ ಪಕ್ಷಗಳ ಮಹಾ ಮೈತ್ರಿಕೂಟದ ಬೆಂಗಳೂರು ಸಭೆಗೆ ಆಗಮಿಸಲಿದ್ದಾರೆ 24 ಪಕ್ಷಗಳ ಪ್ರಮುಖರು
2024 ರ ಸಾರ್ವತ್ರಿಕ ಚುನುವಣೆಯಲ್ಲಿ ಬಿಜೆಪಿ ವಿರುದ್ಧ ಸಂಯುಕ್ತವಾಗಿ ಹೋರಾಡಲು ವಿರೋದ ಪಕ್ಷಗಳು ಮೈತ್ರಿಕೂಟ ರಚಿಸಿವೆ.
ಬೆಂಗಳೂರು: ಯುನೈಟೆಡ್ ವಿ ಸ್ಟ್ಯಾಂಡ್ (United We Stand) ಅಂತ ಹೇಳುತ್ತದೆ ವಿರೋಧ ಪಕ್ಷಗಳ ಒಕ್ಕೂಟದ ಘೋಷವಾಕ್ಯ! ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ವಿರೋಧ ಪಕ್ಷಗಳ ಮಹಾಮೈತ್ರಿ ಕೂಟದ ಸಭೆಗಳು ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ನಡೆಯಲಿವೆ. ದೇಶದ 24 ವಿರೋಧ ಪಕ್ಷಗಳ (opposition parties) ಸುಮಾರು 50 ಕ್ಕೂ ಹೆಚ್ಚು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು ಸಾಯಂಕಾಲ ವಿಶೇಷ ವಿಮಾನವೊಂದರಲ್ಲಿ ನಗರಕ್ಕೆ ಆಗಮಿಸಲಿದ್ದಾರೆ. ಎನ್ ಸಿಪಿಯ ಶರದ್ ಪವಾರ್, ನ್ಯಾಶನಲ್ ಫ್ರಂಟ್ ಪಕ್ಷದ ಫರೂಕ್ ಮತ್ತು ಓಮರ್ ಅಬ್ದುಲ್ಲಾ, ಆರ್ ಜೆಡಿ ಪಕ್ಷದ ಲಾಲು ಪ್ರಸಾದ್ ಯಾದವ್. ತೇಜಸ್ವೀ ಯಾದವ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಮ್ ಸಿ ಮಮತಾ ಬ್ಯಾನರ್ಜೀ, ಶಿವಸೇನೆ (ಉದ್ಧವ್ ಬಣ) ಉದ್ಧವ್ ಠಾಕ್ರೆ, ದೆಹಲಿಯ ಮುಖ್ಯಮಂತ್ರಿ ಮತ್ತು ಆಪ್ ಸಂಚಾಲಕ ಆರವಿಂದ್ ಕೇಜ್ರಿವಾಲ್ ಹಾಗೂ ಇನ್ನೂ ಹಲವಾರು ನಾಯಕರ ಫೋಟೋಗಳು ಬ್ಯಾನರ್ ಗಳಲ್ಲಿ ರಾರಾಜಿಸುತ್ತಿವೆ. 2024 ರ ಸಾರ್ವತ್ರಿಕ ಚುನುವಣೆಯಲ್ಲಿ ಬಿಜೆಪಿ ವಿರುದ್ಧ ಸಂಯುಕ್ತವಾಗಿ ಹೋರಾಡಲು ವಿರೋದ ಪಕ್ಷಗಳು ಮೈತ್ರಿಕೂಟ ರಚಿಸಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ