ಜಿಬಿಐಟಿ ಯೋಜನೆ ವಿರೋಧಿಸಿ ಮಾಗಡಿ ಶಾಸಕ ಬಾಲಕೃಷ್ಣ ಎದುರು ಮಹಿಳೆಯರ ರೋಶಾವೇಷ
ಬಿಡದಿ ಬಳಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಭಅರಿ ವಿರೋಧ ಕೇಳಿಬರುತ್ತಿರುವ ನಡುವೆ, ಇದೇ ವಿಚಾರವಾಗಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರು ಅಡ್ಡಗಟ್ಟಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಅರಳಾಳುಸಂದ್ರ ಬಳಿ ಈ ಘಟನೆ ನಡೆದಿದೆ.
ರಾಮನಗರ, ನವೆಂಬರ್ 07: ಬಿಡದಿ ಬಳಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆ ವಿರೋಧಿಸಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಾರು ಅಡ್ಡಗಟ್ಟಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಅರಳಾಳುಸಂದ್ರ ಬಳಿ ಘಟನೆ ನಡೆದಿದ್ದು, ಈ ವೇಳೆ ಶಾಸಕರ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಪಕ್ಷದ ಕಾರ್ಯಕರ್ತರೋರ್ವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಶಾಸಕ ಬಾಲಕೃಷ್ಣ ಬಂದಿದ್ದ ವೇಳೆ ಮಹಿಳೆಯರು ಕಾರು ಅಡ್ಡಗಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
