Bengaluru Mysuru Expressway: ಟೋಲ್ ದರ ಏರಿಕೆ ಖಂಡಿಸಿ ಬೆಂಗಳೂರು ಮೈಸೂರು ‌ದಶಪಥ ರಸ್ತೆಯಲ್ಲಿ ಪ್ರತಿಭಟನೆ

|

Updated on: Jun 24, 2023 | 11:33 AM

ಟೋಲ್ ದರ ಏರಿಕೆ ಖಂಡಿಸಿ ಬೆಂಗಳೂರು ‌ದಕ್ಷಿಣ ತಾಲೂಕಿನ ಕಣಮಿಣಿಕೆ ‌ಟೋಲ್ ಪ್ಲಾಜಾ‌ ಬಳಿ ಹೆದ್ದಾರಿ ತಡೆದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪ್ರತಿಭಟನೆ ಶುರುವಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ನೂತನ ಬೆಂಗಳೂರು ಮೈಸೂರು ‌ದಶಪಥ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ ಹಿನ್ನೆಲೆ ಟೋಲ್ ದರ ಖಂಡಿಸಿ ಇಂದು (ಜೂನ್ 24) ಪ್ರತಿಭಟನೆ ನಡೆಸಲಾಗುತ್ತಿದೆ. ವಿವಿಧ ಕನ್ನಡಪರ‌ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ‌ದಕ್ಷಿಣ ತಾಲೂಕಿನ ಕಣಮಿಣಿಕೆ ‌ಟೋಲ್ ಪ್ಲಾಜಾ‌ ಬಳಿ ಹೆದ್ದಾರಿ ತಡೆದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪ್ರತಿಭಟನೆ ಶುರುವಾಗಿದ್ದು ವಾಹನ ಸವಾರರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಟೋಲ್​ ದರ ಎಷ್ಟಿದೆ?

ಕಾರು, ವ್ಯಾನ್‌, ಜೀಪ್‌ ಏಕಮುಖ ಸಂಚಾರಕ್ಕೆ 135 ರೂ ರಿಂದ 165 ರೂಗೆ (30 ರೂ.) ಏರಿಕೆಯಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ 220 ರೂ ರಿಂದ 270 ರೂಗೆ (50 ರೂ.) ಏರಿಕೆಯಾಗಿದ್ದು ಟ್ರಕ್‌, ಬಸ್, 2 ಆ್ಯಕ್ಸೆಲ್‌ ವಾಹನ ಏಕಮುಖ ಸಂಚಾರಕ್ಕೆ 460 ರಿಂದ 565 ರೂ. (105 ರೂ.) ಹೆಚ್ಚಳ ಮಾಡಲಾಗಿದೆ.

3 ಆ್ಯಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ 500 ರೂ ರಿಂದ 615ಕ್ಕೆ ಏರಿಕೆ (115 ರೂ.)ಯಾಗಿದ್ದು, ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ 720ರೂ ರಿಂದ 885ಕ್ಕೆ (165 ರೂ.), 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್‌ ವಾಹನಗಳ ಸಂಚಾರಕ್ಕೆ 880ರೂ ರಿಂದ 1,080ಕ್ಕೆ (200 ರೂ.) ಹೆಚ್ಚಿಸಲಾಗಿದೆ.

Follow us on