ಆಷಾಢದಲ್ಲಿ ಖಾಲಿಯಾಗಿರುತ್ತಿದ್ದ ತೀರ್ಥಕ್ಷೇತ್ರಗಳು ಫುಲ್ ರಶ್; ವಿಕೇಂಡ್​ನಲ್ಲಿ ದೇವಸ್ಥಾನಗಳಿಗೆ ಹರಿದು ಬಂದ ಅಪಾರ ಭಕ್ತರು

ಆಷಾಢದಲ್ಲಿ ಖಾಲಿಯಾಗಿರುತ್ತಿದ್ದ ತೀರ್ಥಕ್ಷೇತ್ರಗಳು ಫುಲ್ ರಶ್; ವಿಕೇಂಡ್​ನಲ್ಲಿ ದೇವಸ್ಥಾನಗಳಿಗೆ ಹರಿದು ಬಂದ ಅಪಾರ ಭಕ್ತರು

ಕಿರಣ್ ಹನುಮಂತ್​ ಮಾದಾರ್
|

Updated on:Jun 24, 2023 | 11:00 AM

ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಆಷಾಡದಲ್ಲಿಯೂ ದೇವಸ್ಥಾನಗಳು ಫುಲ್​ ಆಗಿವೆ. ಜಿಲ್ಲೆಯ ತೀರ್ಥ ಕ್ಷೇತ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣಪತಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲವೂ ಭಕ್ತರಿಂದ ತುಂಬಿ ತುಳುಕುತ್ತಿದೆ.

ದಕ್ಷಿಣ ಕನ್ನಡ: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ(Free Bus Service) ಘೋಷಣೆ ಮಾಡಿದ ಹಿನ್ನಲೆ ಆಷಾಡದಲ್ಲಿ ಖಾಲಿಯಾಗಿರುತ್ತಿದ್ದ ತೀರ್ಥಕ್ಷೇತ್ರಗಳು ಇದೀಗ ಫುಲ್ ರಶ್​ಯಾಗಿದೆ. ಜಿಲ್ಲೆಯ ತೀರ್ಥ ಕ್ಷೇತ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣಪತಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾ‌ನ ಸೇರಿದಂತೆ ಜಿಲ್ಲೆಯ ಬಹುತೇಕ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಫ್ರೀ ಬಸ್​ನಿಂದಾಗಿ ಅಷಾಡದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 24, 2023 10:59 AM