ಕುಂಬಾರಪೇಟೆ ಬೆಂಕಿ ದುರಂತದಲ್ಲಿ 5ನೇ ಮಹಡಿಯಲ್ಲಿ ಸಿಲುಕಿದ್ದ ಗೃಹಿಣಿ ಬದುಕುಳಿದಿದ್ದೇ ಪವಾಡ!
ಕೊನೆಗೆ ಅಕ್ಕಪಕ್ಕದ ಮನೆಯವರು ಕವಿತಾ ಸಹಾಯಕ್ಕೆ ಧಾವಿಸಿ ಅಕೆಯತ್ತ ಹಗ್ಗವೊಂದನ್ನು ಎಸೆದು ಅದನ್ನು ಆಕೆ ಸೊಂಟಕ್ಕೆ ಬಿಗಿದುಕೊಂಡ ಬಳಿಕ ಪಕ್ಕದ ಮಹಡಿಗೆ ಎತ್ತಿ ಪ್ರಾಣವುಳಿಸಿದ್ದಾರೆ. ಆದಿಲ್ ಹೆಸರಿನ ವ್ಯಕ್ತಿಗೆ ಈ ಪ್ರಾಪರ್ಟಿ ಸೇರಿದ್ದು ತನ್ನ ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿವೆ ಅಂತ ಕವಿತಾ ಗದ್ಗದಿತರಾಗಿ ಹೇಳುತ್ತಾರೆ.
ಬೆಂಗಳೂರು: ನಿನ್ನೆ ಮಧ್ಯಾಹ್ನ ನಗರದಲ್ಲಿ ಮತ್ತ್ತೊಂದು ಬೆಂಕಿ ಅನಾಹುತ (fire incident) ಸಂಭವಿಸಿದ್ದು ಕುಂಬಾರಪೇಟೆಯಲ್ಲಿದ್ದ (Kumbarpet) ಗೋದಾಮೊಂದು ಹೊತ್ತಿ ಉರಿದಿದೆ. ಇದೇ ಗೋದಾಮಿನ ಮೇಲೆ 5ನೇ ಮಹಡಿಯಲ್ಲಿ ಪತಿಯೊಂದಿಗೆ ವಾಸವಾಗಿದ್ದ ಕವಿತಾ (Kavita) ಹೆಸರಿನ ಮಹಿಳೆ ಬದುಕಿಳಿದಿದ್ದೇ ಒಂದು ಪವಾಡ. ತಾನು ಪಾರಾದ ರೀತಿಯನ್ನು ಕವಿತಾ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಹಂಚಿಕೊಂಡಿದ್ದಾರೆ. ಕೆಳಗಿನ ಮೂರು ಮಹಡಿಗಳನ್ನು ಬೆಂಕಿ ಆವರಿಸಿಕೊಂಡಿದ್ದರಿಂದ ಕವಿತಾಗೆ ಜೀವ ಉಳಿಸಿಕೊಳ್ಳಲು ಮೇಲೆಯೂ ಹೋಗದ ಮತ್ತು ಕೆಳಗೂ ಬಾರದ ಅಸಾಹಯಕ ಮತ್ತು ಘೋರ ಸ್ಥಿತಿ. ಅಕೆಯ ಪತಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರಂತೆ. ಕೊನೆಗೆ ಅಕ್ಕಪಕ್ಕದ ಮನೆಯವರು ಕವಿತಾ ಸಹಾಯಕ್ಕೆ ಧಾವಿಸಿ ಅಕೆಯತ್ತ ಹಗ್ಗವೊಂದನ್ನು ಎಸೆದು ಅದನ್ನು ಆಕೆ ಸೊಂಟಕ್ಕೆ ಬಿಗಿದುಕೊಂಡ ಬಳಿಕ ಪಕ್ಕದ ಮಹಡಿಗೆ ಎತ್ತಿ ಪ್ರಾಣವುಳಿಸಿದ್ದಾರೆ. ಆದಿಲ್ ಹೆಸರಿನ ವ್ಯಕ್ತಿಗೆ ಈ ಪ್ರಾಪರ್ಟಿ ಸೇರಿದ್ದು ತನ್ನ ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿವೆ ಅಂತ ಕವಿತಾ ಗದ್ಗದಿತರಾಗಿ ಹೇಳುತ್ತಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಬಹಳ ತಡವಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ