ಬಸ್ಸಿನ ಆ್ಯಕ್ಸೆಲ್ ಮುರಿದು ಹಿಂದಿನ ಚಕ್ರಗಳು ಕಳಚಿದರೂ ಅದರಲ್ಲಿದ್ದ ಶಾಲಾಮಕ್ಕಳು ಸುರಕ್ಷಿತ
ಹಗರಿಬೊಮ್ಮನಹಳ್ಳಿ ಬಳಿ ಅವರು ಪ್ರಯಾಣಿಸುತ್ತಿದ್ದ ಬಸ್ ಹೀಗೆ ಆ್ಯಕ್ಸೆಲ್ ಮುರಿದು ಚಕ್ರಗಳು ವಾಹನದಿಂದ ಬೇರ್ಪಟ್ಟರೂ ಅಪಾಯದಿಂದ ಪಾರಾಗಿದ್ದಾರೆ.
ವಿಜಯನಗರ: ಸಾಮಾನ್ಯವಾಗಿ, ವಾಹನಗಳ ಹಿಂದಿನ ಚಕ್ರಗಳ ಆ್ಯಕ್ಸೆಲ್ (axel) ಮುರಿದು ಸಂಭವಿಸುವ ಅಪಘಾತಗಳು ಭೀಕರವಾಗಿರುತ್ತವೆ. ಆದರೆ ಪ್ರವಾಸಕ್ಕೆ ಹೊರಟಿದ್ದ ಬಳ್ಳಾರಿ (Ballari) ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಶಾಲೆಯೊಂದರ ಸುಮಾರು 50 ಮತ್ತು ಮಕ್ಕಳು ಮತ್ತು ಶಿಕ್ಷಕರು ನಿಜಕ್ಕೂ ಅದೃಷ್ಟವಂತರು. ವಿಜಯನಗರ (Vijayanagar) ಜಿಲ್ಲೆ ಹಗರಿಬೊಮ್ಮನಹಳ್ಳಿ ಬಳಿ ಅವರು ಪ್ರಯಾಣಿಸುತ್ತಿದ್ದ ಬಸ್ ಹೀಗೆ ಆ್ಯಕ್ಸೆಲ್ ಮುರಿದು ಚಕ್ರಗಳು ವಾಹನದಿಂದ ಬೇರ್ಪಟ್ಟರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನ ಅವಸ್ಥೆ ನೋಡಿದರೆ ಮಕ್ಕಳು ಎಷ್ಟು ಅದೃಷ್ಟಶಾಲಿಗಳು ಅಂತ ಗೊತ್ತಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ