ಹುದ್ದೆ ಒಂದು ಅಧಿಕಾರಿಗಳಿಬ್ಬರು! ಮಂಡ್ಯದ ಡಿಡಿಪಿಯು ಕಚೇರಿಯಲ್ಲಿ ಪೀಕಲಾಟದ ಪ್ರಸಂಗ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2022 | 11:07 AM

ಅದರೆ ಉಮೇಶ್ ತಮ್ಮ ವರ್ಗಾವಣೆ ರದ್ದಿಗೆ ಕೆಎಟಿ ಮೊರೆಹೊಕ್ಕು ಮೊದಲಿದ್ದ ಸ್ಥಳದಲ್ಲೇ ಮುಂದುವರಿಯುವ ಅದೇಶ ಪಡೆದುಕೊಂಡಿದ್ದಾರೆ. ಅಷ್ಟರಲ್ಲಾಗಲೇ, ಮಂಜುನಾಥ ಪ್ರಸನ್ನ ಚಾರ್ಜ್ ವಹಿಸಿಕೊಂಡು ಬಿಟ್ಟಿದ್ದಾರೆ.

ಮಂಡ್ಯ: ಇಂಥ ಸಂಗತಿಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಅದಕ್ಕೆ ಕಾರಣಗಳೂ ಬೇಕಾದಷ್ಟಿರುತ್ತವೆ. ಅವುಗಳಲ್ಲಿ ಒಂದು ಕಾರಣವನ್ನು ಮಂಡ್ಯದ ಈ ಪ್ರಕರಣದಲ್ಲಿ ನೋಡಬಹುದು. ಮಂಡ್ಯದ ಪದವಿ-ಪೂರ್ವ ಶಿಕ್ಷಣ ಇಲಾಖೆ (Dept. of Pre-University Education) ನಿರ್ದೇಶಕನ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಮೊದಲಿದ್ದ ಡಿಡಿಪಿಯು ಉಮೇಶ್ (Umesh) ಅವರನ್ನು ಸರ್ಕಾರ ಕೊಪ್ಪಳಕ್ಕೆ ಟ್ರಾನ್ಸ್ಫರ್ ಮಾಡಿದ ಬಳಿಕ ಅವರ ಸ್ಥಾನಕ್ಕೆ ಮಂಜುನಾಥ ಪ್ರಸನ್ನ (Manjunath Prasanna) ಹೆಸರಿನ ಅಧಿಕಾರಿ ಬಂದಿದ್ದಾರೆ. ಅದರೆ ಉಮೇಶ್ ತಮ್ಮ ವರ್ಗಾವಣೆ ರದ್ದಿಗೆ ಕೆಎಟಿ (KAT) ಮೊರೆಹೊಕ್ಕು ಮೊದಲಿದ್ದ ಸ್ಥಳದಲ್ಲೇ ಮುಂದುವರಿಯುವ ಅದೇಶ ಪಡೆದುಕೊಂಡಿದ್ದಾರೆ. ಅಷ್ಟರಲ್ಲಾಗಲೇ, ಮಂಜುನಾಥ ಪ್ರಸನ್ನ ಚಾರ್ಜ್ ವಹಿಸಿಕೊಂಡು ಬಿಟ್ಟಿದ್ದಾರೆ. ಹಾಗಾಗಿ ಡಿಡಿಪಿಯು ಚೇಂಬರ್ ನಲ್ಲಿ ಒಂದೇ ಹುದ್ದೆಯ ಇಬ್ಬರು ಅಧಿಕಾರಿಗಳನ್ನು ನೀವು ನೋಡಬಹುದು.