‘ಜಾಕಿ’ ಸಿನಿಮಾ ನೋಡಿದ ಅಪ್ಪು ಅಭಿಮಾನಿಗಳ ಭಾವುಕ ಮಾತು

Updated on: Mar 15, 2024 | 11:25 AM

Jackie Movie: ಅಪ್ಪು ನಟಿಸಿದ್ದ 14 ವರ್ಷಗಳ ಹಿಂದಿನ ಸಿನಿಮಾ ‘ಜಾಕಿ’ ಇದೀಗ ಮರು ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಭಾವುಕವಾಗಿ ಮಾತನಾಡಿದ್ದಾರೆ.

ದಿವಂಗತ ಪುನೀತ್ ರಾಜ್​ಕುಮಾರ್ (Puneeth Rajkumar) ನಟನೆಯ ‘ಜಾಕಿ’ ಸಿನಿಮಾ ಇಂದು (ಮಾರ್ಚ್ 15) ಮರು ಬಿಡುಗಡೆ ಆಗಿದೆ. ಅಪ್ಪು ಅಭಿಮಾನಿಗಳು ಸಂಭ್ರಮದಿಂದ ‘ಜಾಕಿ’ ಸಿನಿಮಾವನ್ನು ಮತ್ತೊಮ್ಮೆ ಬರಮಾಡಿಕೊಂಡಿದ್ದಾರೆ. 14 ವರ್ಷದ ಹಿಂದೆ ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೊಮ್ಮೆ ನೋಡಿ ಖುಷಿ ಪಡುತ್ತಿದ್ದಾರೆ. ಅಗಲಿದ ತಮ್ಮ ಮೆಚ್ಚಿನ ನಾಯಕ ನಟನನ್ನು ತೆರೆಯ ಮೇಲೆ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಸಿನಿಮಾ ಮರು ಬಿಡುಗಡೆ ಆಗಿರುವ ಖುಷಿಯ ಜೊತೆಗೆ ಅಪ್ಪು ಇನ್ನಿಲ್ಲ ಎಂಬ ನೋವನ್ನೂ ಅನುಭವಿಸುತ್ತಿದ್ದಾರೆ. ‘ಜಾಕಿ’ ಸಿನಿಮಾ ಮರು ಬಿಡುಗಡೆ ನೋಡಿದ ಕೆಲವು ಅಭಿಮಾನಿಗಳ ಭಾವುಕ ಮಾತುಗಳು ಇಲ್ಲಿವೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 15, 2024 11:23 AM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More