Gandhada Gudi: ಸಮುದ್ರದಾಳದಲ್ಲಿ ಗಂಧದ ಗುಡಿ ಪೋಸ್ಟರ್ ಹಿಡಿದು ನೂತನ ಅಭಿಯಾನ ಆರಂಭಿಸಿದ ಅಭಿಮಾನಿಗಳು
ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸದಸ್ಯರು ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಗಂಧದ ಗುಡಿ ಪೋಸ್ಟರ್ ಹಿಡಿದು ವಿನೂತನವಾಗಿ ಅಭಿಯಾನ ನಡೆಸಿದರು.
ಕಾರವಾರ: ರಾಜ್ಯಾದ್ಯಂತ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಕಿರುಚಿತ್ರದ್ದೇ ಸದ್ದು.ಕಿರು ಚಿತ್ರದ ಪ್ರೀ ರಿಲೀಸ್ ಈವೆಂಟ್ ಸಹ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆದಿದೆ. ಚಿತ್ರದ ಬಹುತೇಕ ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಚಿತ್ರೀಕರಿಸಲಾಗಿದ್ದು, ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲೊ ಸಹ ಇದರ ಚಿತ್ರೀಕರಣ ನೆಡೆದಿತ್ತು.
ಈ ಚಿತ್ರೀಕರಣಕ್ಕೆ ಪುನಿತ್ ಗೆ ನೇತ್ರಾಣಿ ಅಡ್ವೇಂಚರ್ ಸಂಸ್ಥೆ ತರಬೇತಿ ನೀಡಿತ್ತು. ಹೀಗಾಗಿ ಪ್ರೀ ರಿಲೀಸ್ ಈವೆಂಟ್ ಗಾಗಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸದಸ್ಯರು ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಗಂಧದ ಗುಡಿ ಪೋಸ್ಟರ್ ಹಿಡಿದು ವನ್ಯಜೀವಿ ಹಾಗೂ ಸಮುದ್ರ ಜೀವಿಗಳನ್ನು ರಕ್ಷಿಸಿ ಎಂದು ವಿನೂತನವಾಗಿ ಗಂಧದ ಗುಡಿ ಕಿರುಚಿತ್ರದ ಅಭಿಯಾನ ನಡೆಸಿದರು.
Published on: Oct 23, 2022 01:07 PM