ಭರ್ಜರಿ ಓಪನಿಂಗ್​ ಪಡೆದುಕೊಂಡ ‘ಲಕ್ಕಿ ಮ್ಯಾನ್​’; ಚಿತ್ರಮಂದಿರದ ಎದುರು ನೂಕುನುಗ್ಗಲು

| Updated By: ಮದನ್​ ಕುಮಾರ್​

Updated on: Sep 09, 2022 | 2:15 PM

Lucky Man Kannada Movie: ‘ನರ್ತಕಿ’ ಸೇರಿದಂತೆ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ‘ಲಕ್ಕಿ ಮ್ಯಾನ್​’ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈ ಮೂಲಕ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ.

ಪ್ರಭುದೇವ ಸಹೋದರ ಎಸ್​. ನಾಗೇಂದ್ರ ಪ್ರಸಾದ್​ ನಿರ್ದೇಶನ ಮಾಡಿರುವ ‘ಲಕ್ಕಿ ಮ್ಯಾನ್​’ (Lucky Man) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಪ್ರಿಯರು ಮೊದಲ ದಿನವೇ (ಸೆ.9) ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಈ ಸಿನಿಮಾದಲ್ಲಿ ದೇವರ ಪಾತ್ರವಿದೆ. ಹೀರೋ ಆಗಿ ನಟಿಸಿರುವ ಡಾರ್ಲಿಂಗ್​ ಕೃಷ್ಣ ಅವರಿಗೆ ಸಂಗೀತಾ ಶೃಂಗೇರಿ ಜೋಡಿ ಆಗಿದ್ದಾರೆ. ಮತ್ತೋರ್ವ ನಾಯಕಿಯಾಗಿ ರೋಷಿನಿ ಪ್ರಕಾಶ್​ ನಟಿಸಿದ್ದಾರೆ. ಬೆಂಗಳೂರಿನ ‘ನರ್ತಕಿ’ ಸೇರಿದಂತೆ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಈ ಮೂಲಕ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ.