ಜಲಂಧರ್, ಮಾರ್ಚ್ 30: ಪಂಜಾಬ್ನ ಜಲಂಧರ್ ಉದ್ಯಾನ(Park)ದಲ್ಲಿ ಆಟವಾಡುತ್ತಿದ್ದಾಗ 66ಕೆವಿ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಮೂರನೇ ತರಗತಿಯ ವಿದ್ಯಾರ್ಥಿ ಆರವ್‌ನನ್ನು ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವನ ಸುಟ್ಟಗಾಯಗಳ ತೀವ್ರತೆಯಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೃತಸರಕ್ಕೆ ಕರೆದೊಯ್ಯಲಾಯಿತು. ಸ್ಫೋಟದ ನಂತರ ಜನರು ಭಯಭೀತರಾಗಿ ಸ್ಥಳದಿಂದ ಓಡಿಹೋದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಂತಿಮವಾಗಿ, ಅವರಲ್ಲಿ ಕೆಲವರು ಗಾಯಗೊಂಡ ಮಗುವಿಗೆ ಸಹಾಯ ಮಾಡಲು ಮತ್ತೆ ಬಂದಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ