ಗಣೇಶ ಚತುರ್ಥಿಯಲ್ಲೂ ಪುಷ್ಪ-2 ಹವಾ: ಗಂಗಮ್ಮ ಜಾತರ ರೂಪದಲ್ಲಿ ಗಣಪತಿ ಮೂರ್ತಿ
ಹೊಸೂರು ಬಳಿಯ ಡೆಂಕಣಿಕೋಟೆಯಲ್ಲಿ, ಪುಷ್ಪ-2 ಚಿತ್ರದ ಶೈಲಿಯಲ್ಲಿ ಅದ್ದೂರಿಯಾಗಿ ನಿರ್ಮಿಸಲಾಗಿರುವ ಗಣೇಶ ಮಂಟಪವು ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತಿದೆ. 18 ಲಕ್ಷ ರೂಪಾಯಿ ವೆಚ್ಚದ ಈ ಮಂಟಪವನ್ನು 100ಕ್ಕೂ ಹೆಚ್ಚು ಕಲಾವಿದರು ನಿರ್ಮಿಸಿದ್ದಾರೆ. ಬೆಂಗಳೂರು, ಆಂಧ್ರಪ್ರದೇಶ ಮತ್ತು ಕೇರಳದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
ಆನೇಕಲ್, ಆಗಸ್ಟ್ 28: ತಮಿಳುನಾಡಿನ ಹೊಸೂರು ಸಮೀಪದ ಡೆಂಕಣಿಕೋಟೆಯಲ್ಲಿ ಪುಷ್ಪ-2 ಗಣಪನ ಹವಾ ಜೋರಾಗಿದೆ. ಡೆಂಕಣಿಕೋಟೆ ರಾಜಮಾರ್ತಾಂಡ ಭಕ್ತ ಮಂಡಳಿ ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಸೀರೆಯುಟ್ಟ ಕುಣಿಯುವ ಗಂಗಮ್ಮ ಜಾತರ ರೂಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದೆ. ಮಂಟಪವನ್ನು ರಟ್ಟಿನ ರಕ್ತಚಂದನದ ತುಂಡುಗಳಿಂದ ನಿರ್ಮಿಸಲಾಗಿದೆ. ತಗ್ಗೋದೆಯಿಲ್ಲ ಎನ್ನುವ ಪುಷ್ಪನ ಸಿಗ್ನೇಚರ್ ಪ್ರತಿಮೆ ನಿಲ್ಲಿಸಲಾಗಿದೆ. ಪುಷ್ಪನ ಹಿಂದೆ ಹೆಲಿಕಾಪ್ಟರ್ ಪಾರ್ಕ್ ಮಾಡಲಾಗಿದೆ.
ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಪುಷ್ಪ-2 ಸ್ಟೈಲ್ ಗಣಪ ಮಂಟಪ ನಿರ್ಮಾಣ ಮಾಡಲಾಗಿದೆ. 100ಕ್ಕೂ ಅಧಿಕ ಕಲಾವಿದರ ಪರಿಶ್ರಮದಿಂದ ಬೃಹತ್ ಮಂಟಪ ನಿರ್ಮಾಣವಾಗಿದೆ. ಚಿತ್ತಾ ಜಿನೇಂದ್ರ ಮತ್ತು ತಂಡ ನಿರ್ಮಾಣ ಮಾಡಿದೆ. ಈ ಹಿಂದೆ ಬಾಹುಬಲಿ, ಕೆಜಿಎಫ್, ಕಾಂತಾರ, ಕಲ್ಕಿ ಇದೀಗ ಪುಷ್ಪ-2 ಸಿನಿಮಾದ ಪ್ರಮುಖ ಸನ್ನಿವೇಶಗಳ ಸೃಷ್ಟಿ ಮಾಡಿದೆ. ಪುಷ್ಪಾ-2 ಗಣಪನ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಪುಷ್ಪ-2 ಸಿನಿಮಾ ಸ್ಟೈಲ್ ಗಣಪನ ವೀಕ್ಷಣೆಗೆ ಬೆಂಗಳೂರು ಸೇರಿದಂತೆ, ಆಂಧ್ರ ಕೇರಳದಿಂದಲೂ ಜನರು ಆಗಮಿಸುತ್ತಿದ್ದಾರೆ.