WFH: ಆನ್‌ಲೈನ್ ಮೀಟಿಂಗ್‌ನಲ್ಲಿ ಬ್ಯುಸಿಯಾದ ಉದ್ಯೋಗಿ.. ಹಿಂದಿನಿಂದ ಹೆಬ್ಬಾವು ಬಂತು ನೋಡಿ! ವಿಡಿಯೋ ವೈರಲ್ ಆಯ್ತು!
ವಾಸ್ತವದಲ್ಲಿ ಒಬ್ಬ ನಡುವಯಸಿನ ಉದ್ಯೋಗಿ ತನ್ನ ಮನೆಯ ಹೊರಾವರಣದಲ್ಲಿ ಆರಾಮವಾಗಿ ಕುಳಿತುಕೊಂಡು, ತಾನು ಉದ್ಯೋಗ ಮಾಡುವ ಕಚೇರಿಯ ಸಹೋದ್ಯೋಗಿಗಳ ಜೊತೆ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸುತ್ತಾನೆ. ಆದರೆ ಅದೇ ಸಮಯದಲ್ಲಿ ಬೃಹದಾದ ಹಾವೊಂದು (Python Snake) ಮನೆಯ ಮೇಲ್ಛಾವಣಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ.
ಕೋವಿಡ್ ಸಾಂಕ್ರಾಮಿಕ ಮಹಾಮಾರಿ ಜಗತ್ತನ್ನು ಕಾಡಲಾರಂಭಿಸಿದ ನಂತರ ಜನರ ಜೀವನ ಮತ್ತು ಕೆಲಸದಲ್ಲಿ ಅನೇಕ ಬದಲಾವಣೆಗಳಾಗಿವೆ. ಅವುಗಳಲ್ಲಿ ಒಂದು ‘ವರ್ಕ್ ಫ್ರಮ್ ಹೋಮ್’ ಅಂದರೆ ಮನೆಯಿಂದಲೇ ಕೆಲಸ ಮಾಡುವ (WFH) ಸೌಲಭ್ಯ. ಅನೇಕ ಆನ್‌ಲೈನ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತವೆ. ಕಂಪನಿಗಳೂ ಇದರ ಲಾಭ ಪಡೆಯುತ್ತಿವೆ. ಕಚೇರಿ ಖರ್ಚಿನಿಂದ ಹಿಡಿದು ಸಾರಿಗೆ ವೆಚ್ಚದವರೆಗೆ ಎಲ್ಲವೂ ಉಳಿತಾಯವಾಗುತ್ತಿದೆ. ಸದ್ಯ ‘ವರ್ಕ್ ಫ್ರಮ್ ಹೋಮ್’ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.. ಇದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ವಾಸ್ತವದಲ್ಲಿ ಒಬ್ಬ ನಡುವಯಸಿನ ಉದ್ಯೋಗಿ ತನ್ನ ಮನೆಯ ಹೊರಾವರಣದಲ್ಲಿ ಆರಾಮವಾಗಿ ಕುಳಿತುಕೊಂಡು, ತಾನು ಉದ್ಯೋಗ ಮಾಡುವ ಕಚೇರಿಯ ಸಹೋದ್ಯೋಗಿಗಳ ಜೊತೆ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸುತ್ತಾನೆ. ಆದರೆ ಅದೇ ಸಮಯದಲ್ಲಿ ಬೃಹದಾದ ಹಾವೊಂದು (Python Snake) ಮನೆಯ ಮೇಲ್ಛಾವಣಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ಹೆಬ್ಬಾವು ಸಹ ಸಹೋದ್ಯೋಗಿಯೊಂದಿಗೆ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದಂತಿದೆ. ಇದರಿಂದ ಇತರೆ ಸಹೋದ್ಯೋಗಿಗಳು ಅಚ್ಚರಿಗೊಂಡಿದ್ದಾರೆ. ಆದರೆ ಇತ್ತ ಸದರಿ ಉದ್ಯೋಗಿ ಒಂದಿನಿತೂ ವಿಚಲಿತನಾಗದೆ ಮೀಟಿಂಗ್‌ನಲ್ಲಿ ನಿರತನಾಗಿದ್ದ. ನಂತರ ನೇತಾಡುವ ಹೆಬ್ಬಾವು ಸೀಲಿಂಗ್‌ನಿಂದ ಹಿಂದಿರುಗುತ್ತದೆ. ಸಭೆಯಲ್ಲಿ ನಿರತರಾಗಿದ್ದವರು ಸದ್ಯ ಯಾವುದೇ ಅನಾಹುತವಾಗಲಿಲ್ಲವಲ್ಲ ಎಂದು ನಿಟ್ಟುಸಿರುಬಿಟ್ಟು ಮೀಟಿಂಗ್ ಮುಗಿಸುತ್ತಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ