ಸದಾನಂದಗೌಡರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆಯೇ? ಅಶೋಕರಿಂದ ಸ್ಪಷ್ಟ ಉತ್ತರವಿಲ್ಲ!
ಕೆಲ ತಿಂಗಳ ಹಿಂದೆ ಹಾಲಿ ಸಂಸದ ಸದಾನಂದ ಗೌಡ ಬಹಳ ಭಾರದ ಮನಸ್ಸಿನಿಂದ ಚುನಾವಣಾ ರಾಜಕೀಯದಿಂದ ನಿವೃತ್ತರಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ಅವರ ಮನವೊಲಿಸಿ ಪುನಃ ಟಿಕೆಟ್ ನೀಡುವ ಚರ್ಚೆ ನಡೆದಿದೆಯೇ ಎಂದು ಕೇಳಿದ ಪ್ರಶ್ನೆಗೆ ಅಶೋಕ ಸ್ಪಷ್ಟವಾದ ಉತ್ತರ ನೀಡಲಿಲ್ಲ.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಲೋಕಸಭಾ ಚುನಾವಣೆಯಲ್ಲಿ (Lok Sabha polls) ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ (list of candidates) ಇನ್ನೊಂದು ಹಂತದ ಮಾತುಕತೆಯ ಬಳಿಕ ಅಂತಿಮಗೊಳ್ಳಲಿದೆ ಎಂದು ಹೇಳಿದರು. ಸಮಸ್ಯೆಗಳಿರುವ ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹೆಸರು ಹೆಚ್ಚು ಕಡಿಮೆ ಅಂತಿಮಗೊಂಡಿದೆ, ಹಾಲಿ ಸಂಸದರ ಪಕಿ ತಮ್ಮ ಕ್ಷೇತ್ರಗಳಲ್ಲಿ ಚೆನ್ನಾಗಿ ಕೆಲಸ ಮಾಡಿದವರಿಗೆ ಮತ್ತೇ ಟಿಕೆಟ್ ನೀಡುವ ಯೋಚನೆ ಇದೆ ಎಂದು ಅಶೋಕ ಹೇಳಿದರು. ಕೆಲ ತಿಂಗಳ ಹಿಂದೆ ಹಾಲಿ ಸಂಸದ ಸದಾನಂದ ಗೌಡ ಬಹಳ ಭಾರದ ಮನಸ್ಸಿನಿಂದ ಚುನಾವಣಾ ರಾಜಕೀಯದಿಂದ ನಿವೃತ್ತರಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ಅವರ ಮನವೊಲಿಸಿ ಪುನಃ ಟಿಕೆಟ್ ನೀಡುವ ಚರ್ಚೆ ನಡೆದಿದೆಯೇ ಎಂದು ಕೇಳಿದ ಪ್ರಶ್ನೆಗೆ ಅಶೋಕ ಸ್ಪಷ್ಟವಾದ ಉತ್ತರ ನೀಡಲಿಲ್ಲ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರಿಷ್ಠರಿಗೆ ತಿಳಿಸಲಾಗಿದೆ, ಕೇಂದ್ರೀಯ ನಾಯಕರು ಸಹ ಬಂದು ಸಮೀಕ್ಷೆ ನಡೆಸಿದ್ದಾರೆ, ಅಭ್ಯರ್ಥಿಗಳ ಅಯ್ಕೆಯನ್ನು ವರಿಷ್ಠರೇ ಮಾಡಲಿದ್ದಾರೆ, ಅವರು ಟಿಕೆಟ್ ಯಾರಿಗಾದರರೂ ನೀಡಲಿ, ಗೆಲುವಿಗೆ ನಾವೆಲ್ಲ ಶ್ರಮಿಸುತ್ತೇವೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ, ‘ಬಾಂಬ್ ಬೆಂಗಳೂರು’ ಕಳಂಕ ತರಬೇಡಿ ಎಂದ ಆರ್. ಅಶೋಕ್