ಅಶೋಕ ಮಾತಿನಿಂದ ಸುಮಲತಾ ಅಂಬರೀಶ್​ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುವ ಬಗ್ಗೆ ಅನುಮಾನ ಮೂಡುತ್ತದೆ!

ಅಶೋಕ ಮಾತಿನಿಂದ ಸುಮಲತಾ ಅಂಬರೀಶ್​ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುವ ಬಗ್ಗೆ ಅನುಮಾನ ಮೂಡುತ್ತದೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 08, 2024 | 2:01 PM

ಮಂಡ್ಯ ಕ್ಷೇತ್ರದ ಬಗ್ಗೆ ಮಾತಾಡಿದ ಅವರು ಅಲ್ಲಿ ಬಿಜೆಪಿಯ ವೋಟ್ ಬೇಸ್ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ ಪಕ್ಷದ ವೋಟ್ ಶೇರ್ ಹೆಚ್ಚುತ್ತಿದೆ, ಹಾಗಾಗಿ ಈ ಬಾರಿ ಜೆಡಿಎಸ್ ವೋಟು ಸಹ ಸೇರಿಕೊಂಡರೆ ಬಿಜೆಪಿ ಅಥವಾ ಎನ್ ಡಿಎ ಅಭ್ಯರ್ಥಿ ಸುಲಭ ಗೆಲುವು ಸಾಧಿಸಲಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಇಂದು ಸುದ್ದಿಗೋಷ್ಟಿಯಲ್ಲಿ ಮಾತಾಡುವಾಗ ಹಲವಾರು ಪ್ರಶ್ನಗಳಿಗೆ ಉತ್ತರ ನೀಡಿದರಾದರರೂ ಬಹುತೇಕ ಪ್ರಶ್ನೆಗಳಿಗೆ ಸಮಂಜಸವಾಗಿ ಪ್ರತಿಕ್ರಿಯಿಸಲಿಲ್ಲ. ಜೆಡಿಎಸ್ ಜೊತೆ ಸೀಟು ಹೊಂದಾಣಿಕೆ (seat sharing with JDS) ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಆರೋಗ್ಯ ಸರಿಯಲ್ಲ, ಇನ್ನೆರಡು ಮೂರು ದಿನಗಳ ಬಳಿಕ ಅವರು ದೆಹಲಿಗೆ ಹೋಗಿ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ, ಸೀಟು ಹೊಂದಾಣಿಕೆಯ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು ಅದು ಅಂತಿಮಗೊಳ್ಳಬೇಕಿದೆ ಎಂದು ಹೇಳಿದರು. ಮಂಡ್ಯ ಕ್ಷೇತ್ರ ಮತ್ತು ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವ ಕುರಿತು ಅಶೋಕ ಆಡಿದ ಮಾತುಗಳು ಗೊಂದಲ ಸೃಷ್ಟಿಸುವಂತಿದ್ದವು. ಸುಮಲತಾ ಅವರು ಲೋಕಸಭೆಗೆ ಆಯ್ಕೆಯಾದ ಆರು ತಿಂಗಳೊಳಗೆ ಬಿಜೆಪಿ ಸೇರಬೇಕಿತ್ತು ಅದರೆ ಅವರು ಕಳೆದ ವರ್ಷ ಸೇರಿದ್ದಾರೆ. ಅವರಿಗೆ ಟಿಕೆಟ್ ಸಿಗುವ ಬಗ್ಗೆ ತನಗೆ ಗೊತ್ತಿಲ್ಲ, ವರಿಷ್ಠರು ಆ ತೀರ್ಮಾನ ತೆಗೆದುಕೊಳ್ಳುತ್ತಾರೆ ಮತ್ತು ಆ ತೀರ್ಮಾನಕ್ಕೆ ತಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಆಶೋಕ ಹೇಳಿದರು. ಮಂಡ್ಯ ಕ್ಷೇತ್ರದ ಬಗ್ಗೆ ಮಾತಾಡಿದ ಅವರು ಅಲ್ಲಿ ಬಿಜೆಪಿಯ ವೋಟ್ ಬೇಸ್ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ ಪಕ್ಷದ ವೋಟ್ ಶೇರ್ ಹೆಚ್ಚುತ್ತಿದೆ, ಹಾಗಾಗಿ ಈ ಬಾರಿ ಜೆಡಿಎಸ್ ವೋಟು ಸಹ ಸೇರಿಕೊಂಡರೆ ಬಿಜೆಪಿ ಅಥವಾ ಎನ್ ಡಿಎ ಅಭ್ಯರ್ಥಿ ಸುಲಭ ಗೆಲುವು ಸಾಧಿಸಲಿದ್ದಾರೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಧಾನ ಸೌಧದಲ್ಲಿ ನಡೆದ ದೇಶದ್ರೋಹಿ ಕೃತ್ಯಕ್ಕೆ ಸಾಕ್ಷಿ ಕೇಳುವ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು: ಆರ್ ಅಶೋಕ