ಪ್ರಜ್ವಲ್ ರೇವಣ್ಣ ಪ್ರಕರಣ; ಮೈತ್ರಿ ಬಗ್ಗೆ ನಿಲುವು ಸ್ಪಷ್ಟಪಡಿಸದೆ ನುಣುಚಿಕೊಳ್ಳುತ್ತಿರುವ ಅಶೋಕ ಒಬ್ಬ ಬೆನ್ನುಮೂಳೆಯಿಲ್ಲದ ನಾಯಕ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 30, 2024 | 5:36 PM

ಯಾಕೆ ಬಿಜೆಪಿ ನಾಯಕರು ಮೈತ್ರಿ ಬಗ್ಗೆ ಮಾತಾಡುತ್ತಿಲ್ಲ? ತಮ್ಮ ನಿಲುವು ಏನು ಅನ್ನೋದನ್ನು ಯಾಕೆ ಸ್ಪಷ್ಟಪಡಿಸುತ್ತಿಲ್ಲ? ಮೈತ್ರಿಯನ್ನು ಮುಂದುವರಿಸುತ್ತೀರಾ, ಮೊಟಕುಗೊಳಿಸುತ್ತೀರಾ ಅಂತ ಅಶೋಕ ಹೇಳಬೇಕು ತಾನೇ? ಮುಂದುವರಿಸುತ್ತೇವೆ ಅಂತ್ಲೇ ಹೇಳಲಿ ಯಾರು ಬೇಡ ಅಂತಾರೆ, ಆದರೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಲ್ವಾ? ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು (R Ashoka) ಒಬ್ಬ ಬೆನ್ನುಮೂಳೆಯಿಲ್ಲದ ನಾಯಕ (spineless leader) ಎಂದು ಜರಿದರು. ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಅಶೋಕ, ಪ್ರಜ್ವಲ್ ರೇವಣ್ಣ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಒಬ್ಬ ಹಿರಿಯ ನಾಯಕನಾಗಿ ಅವರು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜ್ವಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದು ನಿಜ, ಅದನ್ನು ಅಲ್ಲಗಳೆಯುವುದಿಲ್ಲ, ಆದರೆ 2024 ರ ಚುನಾವಣೆಗೆ ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿಯ ಬಗ್ಗೆ ಅಶೋಕ ಯಾಕೆ ಮಾತಾಡಲ್ಲ, ಎಲ್ಲರೂ ಜಾರಿಕೊಂಡರೆ ಉತ್ತರ ಕೊಡುವವರು ಯಾರು? ಎಂದು ಶಿವಕುಮಾರ್ ಕೇಳಿದರು.

ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ ಕುಮಾರ್, ಅಶ್ವಥ್ ನಾರಾಯಣ, ಪ್ರಲ್ಹಾದ್ ಜೋಶಿ ಮೊದಲಾದವರೆಲ್ಲ ಎಲ್ಲಿ? ಯಾಕೆ ಅವರು ಮೈತ್ರಿ ಬಗ್ಗೆ ಮಾತಾಡುತ್ತಿಲ್ಲ? ತಮ್ಮ ನಿಲುವು ಏನು ಅನ್ನೋದನ್ನು ಯಾಕೆ ಸ್ಪಷ್ಟಪಡಿಸುತ್ತಿಲ್ಲ? ಮೈತ್ರಿಯನ್ನು ಮುಂದುವರಿಸುತ್ತೀರಾ, ಮೊಟಕುಗೊಳಿಸುತ್ತೀರಾ ಅಂತ ಅಶೋಕ ಹೇಳಬೇಕು ತಾನೇ? ಮುಂದುವರಿಸುತ್ತೇವೆ ಅಂತ್ಲೇ ಹೇಳಲಿ ಯಾರು ಬೇಡ ಅಂತಾರೆ, ಆದರೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಲ್ವಾ? ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ, ಶಿವಕುಮಾರ್ ವಿರುದ್ಧ ಆರೋಪ ಮಾಡಬಹುದು ಅದರೆ ಅವು ತನಿಖೆಯಲ್ಲಿ ಸಾಬೀತಾಗಬೇಕು: ಸತೀಶ್ ಜಾರಕಿಹೊಳಿ

Loading...
Unable to load recommendations.
Follow Us