Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರ ಬಗ್ಗೆ ಬಹಳ ಗೌರವವಿದೆ, ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ: ಡಿಕೆ ಶಿವಕುಮಾರ್

ಮಹಿಳೆಯರ ಬಗ್ಗೆ ಬಹಳ ಗೌರವವಿದೆ, ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 30, 2024 | 3:59 PM

ಕುಮಾರಸ್ವಾಮಿ ಚುನಾವಣಾ ಪ್ರಚಾರದಲಲ್ಲಿ ಪ್ರಜ್ವಲ್ ನನ್ನ ಮಗ ಅಂತ ಹೇಳಿದವರು ಈಗ ಆ ಕುಟುಂಬವೇ ಬೇರೆ ಅನ್ನುತ್ತಿದ್ದಾರೆ ಎಂದ ಶಿವಕುಮಾರ್ ತನಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ ಎಂದರು.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹುಬ್ಬಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna case) ಹಿಂದೆ ಡಿಕೆ ಶಿವಕುಮಾರ್ (DK Shivakumar) ಪಾತ್ರವಿದೆ ಅಂತ ಹೇಳಿರುವುದಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ತನ್ನ ಮನೆಯ ಮುಂದೆ ಪ್ರತಿಭಟನೆ ಮಾಡಿಸುವುದಾದರೆ ಧಾರಾಳವಾಗಿ ಮುಂದುವರಿಯಲಿ ಎಂದ ಶಿವಕುಮಾರ್, ಕುಮಾರಸ್ವಾಮಿಯವರ ಹೇಳಿಕೆ ಮತ್ತು ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ಅವರು ಪ್ರಜ್ವಲ್ ವಿಡಿಯೋಗಳ ಬಗ್ಗೆ ಪಕ್ಷದ ವರಿಷ್ಟರಿಗೆ ಪತ್ರ ಬರೆದು ಹೇಳಿರುವದನ್ನು ಓದಿ ಹೇಳಿದರು. ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿದರೆ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ, ಚುನಾವಣೆಯಲ್ಲಿ ಕಾಂಗ್ರೆಸ್ ಈ ಅಂಶವನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತದೆ ಎಂದು ಬರೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಕುಮಾರಸ್ವಾಮಿ ಚುನಾವಣಾ ಪ್ರಚಾರದಲಲ್ಲಿ ಪ್ರಜ್ವಲ್ ನನ್ನ ಮಗ ಅಂತ ಹೇಳಿದವರು ಈಗ ಆ ಕುಟುಂಬವೇ ಬೇರೆ ಅನ್ನುತ್ತಿದ್ದಾರೆ ಎಂದ ಶಿವಕುಮಾರ್ ತನಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಈಗ ಫ್ರೀಯಾಗಿದ್ದಾರೆ, ಎಲ್ಲ ವಿಷಯಗಳ ಬಗ್ಗೆ ಮಾತಾಡಲಿ: ಡಿಕೆ ಶಿವಕುಮಾರ್