ಜಾತಿ ಗಣತಿ ಹಳ್ಳ ಹಿಡಿದಿದೆ: ವಿಪಕ್ಷ ನಾಯಕ ಆರ್​.ಅಶೋಕ್​ ಆರೋಪ

Updated By: ಪ್ರಸನ್ನ ಹೆಗಡೆ

Updated on: Oct 09, 2025 | 6:07 PM

ರಾಜ್ಯ ಸರ್ಕಾರ ನಡೆಸುತ್ತಿರೋ ಜಾತಿ ಗಣತಿ ಬಗ್ಗೆ ವಿಪಕ್ಷ ನಾಯಕ ಆರ್​. ಅಶೋಕ್​ ವಾಗ್ದಾಳಿ ನಡೆಸಿದ್ದಾರೆ. ಗಣತಿಯ ದತ್ತಾಂಶ ಸಂಗ್ರಹ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಬೆಂಗಳೂರಲ್ಲಿ ಸಮೀಕ್ಷೆ ಈಗ ಶುರುವಾಗಿದೆ. ಹೀಗಿದ್ದರೂ ಆಗಲೇ ಶೇ. 70 ಮುಗಿದಿದೆ ಎಂದು ಹೇಳ್ತಿದ್ದಾರೆ. ವಾಸ್ತವ ಏನೆಂದರೆ ಸೆಕ್ಯೂರಿಟಿಗಾರ್ಡ್‌ ಬಳಿ ಮಾಹಿತಿ ಪಡೆದು ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಅಂತಾ ನನ್ನ ಬಳಿ ಮಹಿಳೆಯರು ಹೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​ 09: ರಾಜ್ಯ ಸರ್ಕಾರ ನಡೆಸುತ್ತಿರೋ ಜಾತಿ ಗಣತಿ (Caste Census) ಹಳ್ಳ ಹಿಡಿಯುತ್ತಿದ್ದು, ಜನರಲ್ಲಿ ಅನುಮಾನ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಹಠ ಹಿಡಿದು ಜಾತಿ ಸಮೀಕ್ಷೆ ಅವಧಿ ಮುಂದುವರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಆರೋಪಿಸಿದ್ದಾರೆ. ಗಣತಿಯ ದತ್ತಾಂಶ ಸಂಗ್ರಹ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಬೆಂಗಳೂರಲ್ಲಿ ಈಗ ಸಮೀಕ್ಷೆ ಶುರುವಾಗಿದೆ, ಹೀಗಿದ್ದರೂ ಆಗಲೇ ಶೇ. 70 ಮುಗಿದಿದೆ ಎಂದು ಹೇಳ್ತಿದ್ದಾರೆ. ವಾಸ್ತವ ಏನೆಂದರೆ ಸೆಕ್ಯೂರಿಟಿಗಾರ್ಡ್‌ ಬಳಿ ಮಾಹಿತಿ ಪಡೆದು ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಅಂತಾ ನನ್ನ ಬಳಿ ಬಂದಿದ್ದ ಮಹಿಳೆಯರು ಹೇಳಿದ್ದಾರೆ. ಗಣತಿಗೆ ಬರುವವರು ಕೇಳಿದ ಮಾಹಿತಿಗಳನ್ನೆಲ್ಲ ಕೊಟ್ಟರೆ ಗ್ಯಾರಂಟಿನೂ ಕಟ್, ರೇಷನ್ ಕಾರ್ಡ್ ಕೂಡ​ ಕಟ್ ಎಂದು ಅಶೋಕ್​ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.