Raayan Raj Sarja: ರಾಯನ್ ಜತೆ ಟ್ರಿಪ್ ಹೋಗಲಿದ್ದಾರೆ ಮೇಘನಾ ರಾಜ್
ರಾಯನ್ನನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆ ಮೇಘನಾ ಅವರದ್ದಾಗಿತ್ತು. ಆದರೆ, ಕೊವಿಡ್ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊದಗಿತ್ತು.
ರಾಯನ್ ರಾಜ್ ಸರ್ಜಾಗೆ ಈಗ ಒಂದು ವರ್ಷ. ಇಂದು (ಅಕ್ಟೋಬರ್ 22) ಅದ್ದೂರಿಯಾಗಿ ರಾಯನ್ ಜನ್ಮದಿನವನ್ನು ಆಚರಿಸಲಾಗಿದೆ. ಕಾಡಿನ ಥೀಮ್ನಲ್ಲಿ ಬರ್ತ್ಡೇ ಆಚರಣೆ ಮಾಡಲಾಗಿದೆ. ಅನೇಕರು ಈ ಬರ್ತ್ಡೇಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮೇಘನಾ ರಾಜ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ರಾಯನ್ನನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆ ಮೇಘನಾ ಅವರದ್ದಾಗಿತ್ತು. ಆದರೆ, ಕೊವಿಡ್ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮನೆಯಲ್ಲೇ ಇರುವ ಪರಿಸ್ಥಿತಿ ಬಂದೊದಗಿತ್ತು. ಈಗ ಕೊವಿಡ್ ಕಡಿಮೆ ಆಗಿದೆ. ಈ ಕಾರಣಕ್ಕೆ ಆತನನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗುವ ಆಲೋಚನೆ ಮೇಘನಾಗೆ ಇದೆ.
ಇದನ್ನೂ ಓದಿ: Raayan Raj Sarja: ಕಾಡಿನ ಥೀಮ್ನಲ್ಲಿ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ; ಮೇಘನಾ ಮನೆಯಲ್ಲಿ ಅದ್ದೂರಿ ಆಚರಣೆ