Raayan Raj Sarja: ‘ನನ್ನ ಮೊಮ್ಮಗ ಕೂಡ ಸೂಪರ್​ ಸ್ಟಾರ್​ ಆಗ್ತಾನೆ’; ರಾಯನ್​ ಬಗ್ಗೆ ಭವಿಷ್ಯ ನುಡಿದ ಸುಂದರ್​ ರಾಜ್​

| Updated By: ಮದನ್​ ಕುಮಾರ್​

Updated on: Nov 11, 2022 | 11:33 AM

Sundar Raj | Meghana Raj: ಚಿರಂಜೀವಿ ಸರ್ಜಾ ಪುತ್ರ ರಾಯನ್​ ರಾಜ್​ ಸರ್ಜಾ ಬಗ್ಗೆ ಸುಂದರ್​ ರಾಜ್​ ಭವಿಷ್ಯ ನಡಿದಿದ್ದಾರೆ. ‘ನನ್ನ ಮೊಮ್ಮಗ ಸೂಪರ್​ ಸ್ಟಾರ್​’ ಆಗ್ತಾನೆ ಎಂದು ಅವರು ಹೇಳಿದ್ದಾರೆ.

ನಟ ಸುಂದರ್​ ರಾಜ್​ ಅವರದ್ದು ಕಲಾವಿದರ ಕುಟುಂಬ. ಅವರ ಪುತ್ರಿ ಮೇಘನಾ ರಾಜ್​ (Meghana Raj) ಅವರು ಮದುವೆ ಆಗಿ ಸೇರಿರುವ ಸರ್ಜಾ ಕುಟುಂಬ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ದಂಪತಿಯ ಪುತ್ರ ರಾಯನ್​ ರಾಜ್​ ಸರ್ಜಾ (Raayan Raj Sarja) ಕೂಡ ಸೂಪರ್​ ಸ್ಟಾರ್​ ಆಗ್ತಾನೆ ಎಂದು ಸುಂದರ್ ರಾಜ್​ (Sundar Raj) ಅವರು ಭವಿಷ್ಯ ನುಡಿದಿದ್ದಾರೆ. ಸುನಾಮಿ ಕಿಟ್ಟಿ ನಟನೆಯ ಹೊಸ ಸಿನಿಮಾದ ಟೀಸರ್​ ಲಾಂಚ್​ ವೇಳೆ ಅವರು ಈ ಮಾತುಗಳನ್ನು ಹಂಚಿಕೊಂಡರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.