ಬಿಗ್ಬಾಸ್ ಮನೆಗೆ ಬಂದ ಸುದ್ದಿ ವಾಚಕಿ, ಮನೆ ಮಂದಿಗೆ ಕ್ಲಾಸ್
Bigg Boss Kannada season 11: ಸುದ್ದಿ ವಾಚಕಿ ರಾಧಾ ಹಿರೇಗೌಡರ್, ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಮನೆಯಲ್ಲಿ ರಾಜಕೀಯದ ಟಾಸ್ಕ್ ನಡೆಯುತ್ತಿದ್ದು, ಮನೆಯ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲೀಗ ರಾಜಕೀಯ ಹವಾ ಎದ್ದಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ ಬಿಗ್ಬಾಸ್. ಮನೆಯಲ್ಲಿ ಪಕ್ಷ ರಾಜಕೀಯದ ಹವಾ ಜೋರಾಗಿರುವ ಸಂದರ್ಭದಲ್ಲಿಯೇ ಮನೆಗೆ ಸುದ್ದಿ ವಾಚಕಿಯೊಬ್ಬರ ಎಂಟ್ರಿ ಆಗಿದೆ. ಕನ್ನಡದ ಬೇರೆ ಬೇರೆ ವಾಹಿನಿಗಳಲ್ಲಿ ಸುದ್ದಿ ವಾಚಕಿಯಾಗಿ ಜನಪ್ರಿಯತೆ ಗಳಿಸಿರುವ ರಾಧಾ ಹಿರೇಗೌಡರ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮನೆಯಲ್ಲಿರುವ ಎರಡು ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ನೇರಾ-ನೇರ ವಿಶ್ಲೇಷಣೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos