ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಸಿಕ್ತು ಚಾಲನೆ

|

Updated on: Sep 15, 2024 | 11:02 PM

ಕನ್ನಡದ ‘ಭೈರಾದೃವಿ’ ಸಿನಿಮಾ ಅಕ್ಟೋಬರ್ 3ರಂದು ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಈ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಿಸಿದ್ದಾರೆ. ಅಲ್ಲದೇ, ಅವರೇ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ನಾಡಹಬ್ಬ ನವರಾತ್ರಿಯ ಮೊದಲ ದಿನ ಈ ಸಿನಿಮಾ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಸಿನಿಮಾದ ರಿಲೀಸ್​ ದಿನಾಂಕ ಘೋಷಣೆ ಆಗಿದೆ. ಅ.3ರಂದು ಈ ಸಿನಿಮಾ ತೆರೆಕಾಣಲಿದ್ದು, ಪ್ರಚಾರ ಕಾರ್ಯದಲ್ಲಿ ರಾಧಿಕಾ ಅವರು ತೊಡಗಿಕೊಂಡಿದ್ದಾರೆ. ಅವರ ನಿವಾಸದ ಬಳಿ ‘ಭೈರಾದೇವಿ’ ಸಿನಿಮಾಗೆ ಟ್ಯಾಬ್ಲೊ ಮತ್ತು ಆಟೋ ಪ್ರಚಾರ ಆರಂಭಿಸಲಾಯಿತು. ಈ ವೇಳೆ ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ಆಟೋ ಚಾಲನೆ ಮಾಡಿದರು. ಈ ಕ್ಷಣಕ್ಕೆ ನೂರಾರು ಪುರುಷ ಮತ್ತು ಮಹಿಳಾ ಆಟೋ ಚಾಲಕರು ಸಾಕ್ಷಿಯಾದರು. ‘ಭೈರಾದೇವಿ’ ಸಿನಿಮಾದ ಪೋಸ್ಟರ್ ಇರುವ ಟ್ಯಾಬ್ಲೊ ಮತ್ತು ಆಟೋಗಳು ರಾಜ್ಯಾದ್ಯಂತ ಸಂಚರಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.