‘ಕೆಜಿಎಫ್ 2’ ವೀಕ್ಷಿಸಿದ್ದಾರೆ ರಾಧಿಕಾ ಪಂಡಿತ್; ಸಿನಿಮಾ ಬಗ್ಗೆ ಅವರು ಹೇಳಿದ್ದಿಷ್ಟು
‘ಕೆಜಿಎಫ್ 2’ ಚಿತ್ರವನ್ನು ಯಶ್ ಪತ್ನಿ ರಾಧಿಕಾ ಪಂಡಿತ್ ವೀಕ್ಷಿಸಿದ್ದಾರೆ. ಈ ಬಗ್ಗೆ ಅವರು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಕೆಜಿಎಫ್ 2’ ಸಿನಿಮಾ (KGF Chapter 2) ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇಂದು (ಮಾರ್ಚ್ 27) ರಿಲೀಸ್ ಆದ ಟ್ರೇಲರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೆಜಿಎಫ್ಗೆ ಕಿಂಗ್ ಆಗುವ ರಾಕಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರವನ್ನು ಯಶ್ ಪತ್ನಿ ರಾಧಿಕಾ ಪಂಡಿತ್ ವೀಕ್ಷಿಸಿದ್ದಾರೆ. ಈ ಬಗ್ಗೆ ಅವರು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯಶ್ (Yash) ಮಾತನಾಡಿದ ಬಳಿಕ ರಾಧಿಕಾ ಪಂಡಿತ್ (Radhika Pandit) ವೇದಿಕೆ ಏರಿದರು. ಈ ಸಿನಿಮಾ ಹೇಗಿದೆ ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ‘ನನ್ನ ಪತಿಯ ಸಿನಿಮಾ ಎಂದು ನಾನು ಹೊಗಳುತ್ತಿಲ್ಲ. ‘ಕೆಜಿಎಫ್’ ಎನ್ನುವ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಪ್ರೀತಿ ಇದೆ. ನಾನು ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾವನ್ನು ನಾನು ನಿಜಕ್ಕೂ ಇಷ್ಟಪಟ್ಟೆ’ ಎಂದು ಹೇಳಿದ್ದಾರೆ ಅವರು.
ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರವನ್ನು ಪುನೀತ್ಗೆ ಅರ್ಪಿಸಿದ ಪ್ರಶಾಂತ್ ನೀಲ್
‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್