ಮದುವೆಯೊಂದರಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ರಾಧಿಕಾ ಅಭಿಮಾನಿಗಳನ್ನು ಖುಷಿಪಡಿಸಿದರು
ಎರಡು ಮಕ್ಕಳ ತಾಯಿಯಾದರೂ ರಾಧಿಕಾ ಅವರ ಮುಖದಲ್ಲಿ ಈಗಷ್ಟೇ ಚಿತ್ರರಂಗ ಪ್ರವೇಶಿಸಿರುವ ಹಲವಾರು ಯುವನಟಿಯರಿಗಿಂತ ಹೆಚ್ಚು ಕಳೆ ಮತ್ತು ತಾಜಾತನದಲ್ಲಿದೆ. ಅವರು ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು 2019ರಲಿ ಬಿಡುಗಡೆಯಾದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ.
ಸ್ಯಾಂಡಲ್ ವುಡ್ ಸೆಲಿಬ್ರಿಟಿ ದಂಪತಿ ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಾಕಿದರೂ ಅದು ಸುದ್ದಿಯಾಗಿ ಬಿಡುತ್ತದೆ ಮಾರಾಯ್ರೇ. ಇನ್ನು ಸರಣಿ ಫೋಟೊಗಳನ್ನು ಪೋಸ್ಟ್ ಮಾಡಿದರೆ ಕೇಳಬೇಕೇ? ವಿಷಯ ಏನು ಗೊತ್ತಾ? ಇತ್ತೀಚಿಗೆ ಯಶ್ ಅವರು ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್ ಹಾಗೂ ತಮ್ಮಿಬ್ಬರು ಕ್ಯೂಟ್ ಮಕ್ಕಳೊಂದಿಗೆ ರಾಧಿಕಾ ಅವರ ಸಂಬಂಧಿಕರ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಮಿಸೆಸ್ ರಾಮಾಚಾರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳ ರಿಯಾಕ್ಷನ್ ಕೇಳಬೇಕಾ? ಎಲ್ಲರೂ ಲೈಕ್ ಮಾಡುತ್ತಾ ಹೊಗಳಿದ್ದೇ ಹೊಗಳಿದ್ದು!
ಮದುವೆ-ಸಂಸಾರ-ಮಕ್ಕಳು ಅಂತ ಚಿತ್ರರಂಗದಿಂದ ಹೆಚ್ಚು ಕಡಿಮೆ ದೂರವೇ ಆಗಿರುವ ರಾಧಿಕಾ ಮದುವೆಯಲ್ಲಿ ಹಳದಿ ಬಣ್ಣದ ಸಿಲ್ಕ್ ಸೀರೆಯುಟ್ಟು ಮಿಂಚುತ್ತಿದ್ದಾರೆ. ‘ಕೆಜಿಎಫ್’ ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಅಗಿರುವ ಯಶ್ ಕಪ್ಪು ವರ್ಣದ ಕುರ್ತಾ ಧರಿಸಿದ್ದಾರೆ. ಮಕ್ಕಳು ಐರಾ ಮತ್ತು ಯಥರ್ವ್ಗೆ ಹಳದಿ ಬಣ್ಣದ ದಿರಿಸುಗಳನ್ನು ಉಡಿಸಲಾಗಿದೆ.
ಎರಡು ಮಕ್ಕಳ ತಾಯಿಯಾದರೂ ರಾಧಿಕಾ ಅವರ ಮುಖದಲ್ಲಿ ಈಗಷ್ಟೇ ಚಿತ್ರರಂಗ ಪ್ರವೇಶಿಸಿರುವ ಹಲವಾರು ಯುವನಟಿಯರಿಗಿಂತ ಹೆಚ್ಚು ಕಳೆ ಮತ್ತು ತಾಜಾತನದಲ್ಲಿದೆ. ಅವರು ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು 2019ರಲಿ ಬಿಡುಗಡೆಯಾದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ.
ಅವರ ಅಭಿಮಾನಿಗಳಂತೂ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ಯನ್ನು ಜೊತೆಯಾಗಿ ತೆರೆಯ ಮೇಲೆ ನೋಡಲು ಕಾತುರರಾಗಿದ್ದಾರೆ.
ಇದನ್ನೂ ಓದಿ: Yash: ಮುಂಬೈನಲ್ಲಿ ಕಾಣಿಸಿಕೊಂಡ ಯಶ್; ಇದರ ಹಿಂದಿರೋ ರಹಸ್ಯ ಏನು?