‘ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್​’: ‘13’ ಚಿತ್ರದ ಬಗ್ಗೆ ವಿವರಿಸಿದ ರಾಘಣ್ಣ

‘ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್​’: ‘13’ ಚಿತ್ರದ ಬಗ್ಗೆ ವಿವರಿಸಿದ ರಾಘಣ್ಣ

ಮದನ್​ ಕುಮಾರ್​
|

Updated on: Sep 05, 2023 | 7:42 PM

‘ಜೀವನದಲ್ಲಿ ಗಂಡು-ಹೆಣ್ಣು ಎಂಬುದು ಮುಖ್ಯವಾಗುತ್ತದೆ. ಯಾವ ಧರ್ಮ ಎಂಬುದು ಮುಖ್ಯವಾಗುವುದಿಲ್ಲ. ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್​ ನಡೆಯುತ್ತದೆ’ ಎಂದು ಹೇಳುವ ಮೂಲಕ ‘13’ ಸಿನಿಮಾದ ಕಥಾಹಂದರದ ಬಗ್ಗೆ ರಾಘವೇಂದ್ರ ರಾಜ್​ಕುಮಾರ್​ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಜೋಡಿಯಾಗಿ ಶ್ರುತಿ ನಟಿಸಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ನಟನೆಯ ‘13’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಕೆ. ನಾಗೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಪ್ರಮೋದ್​ ಶೆಟ್ಟಿ, ಶ್ರುತಿ ಮುಂತಾದವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘13’ (13 Kannada Movie) ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ಹಿಂದೂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದಾರೆ. ಆ ಸಾಮರಸ್ಯದ ಬಗ್ಗೆ ರಾಘಣ್ಣ ವಿವರಿಸಿದ್ದಾರೆ. ‘ಜೀವನದಲ್ಲಿ ಗಂಡು-ಹೆಣ್ಣು ಎಂಬುದು ಮುಖ್ಯವಾಗುತ್ತದೆ. ಯಾವ ಧರ್ಮ ಎಂಬುದು ಮುಖ್ಯವಾಗುವುದಿಲ್ಲ. ಮನೆಯಲ್ಲಿ ಒಂದು ಕಡೆ ಪೂಜೆ, ಇನ್ನೊಂದು ಕಡೆ ನಮಾಜ್​ ನಡೆಯುತ್ತದೆ. ಶ್ರುತಿ (Shruthi) ಅವರು ಅದ್ಭುತವಾಗಿ ನಟಿಸಿದ್ದಾರೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ. ‘ಸಂದೇಶ ಕೊಡಲು ಈ ಸಿನಿಮಾ ಮಾಡಿಲ್ಲ. ಮನರಂಜನೆ ನೀಡುವ ಉದ್ದೇಶದಿಂದ ಈ ಚಿತ್ರ ಮಾಡಿದ್ದೇವೆ’ ಎಂದಿದ್ದಾರೆ ರಾಘಣ್ಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.