‘ರಂಗಸಮುದ್ರ’ ನಿರ್ದೇಶಕರ ಬಳಿ ರಾಘಣ್ಣನ ವಿನಯಪೂರ್ಣ ಮನವಿ
Raghavendra Rajkumar: ‘ರಂಗಸಮುದ್ರ’ ಸಿನಿಮಾದಲ್ಲಿ ಅಪ್ಪು ನಟಿಸಬೇಕಿದ್ದ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ನಿರ್ದೇಶಕರ ಬಳಿ ಮನವಿಯೊಂದನ್ನು ಮಾಡಿದ್ದಾರೆ.
ಸಾಮಾಜಿಕ ಸಂದೇಶವುಳ್ಳ ‘ರಂಗಸಮುದ್ರ’ (Rangasamudra) ಸಿನಿಮಾ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ರಾಘವೇಂದ್ರ ರಾಜ್ಕುಮಾರ್ ಅವರು ಸಹ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾದ ಶೋ ನೋಡಿ ಬಂದ ರಾಘಣ್ಣ, ಸಿನಿಮಾದಲ್ಲಿ ಮೊದಲು ನನ್ನ ಹೆಸರು ಬರುತ್ತದೆ, ಆದರೆ ನಿರ್ದೇಶಕರಲ್ಲಿ ನಾನು ಮನವಿ ಮಾಡುತ್ತೇನೆ, ಮೊದಲು ರಂಗಾಯಣ ರಘು ಅವರ ಹೆಸರು ಹಾಕಿ. ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರು ಹಾಗೂ ಇನ್ನೂ ಕೆಲವು ನಟರ ನಟನೆ ನೋಡಿ ನಾನು ನಟನೇ ಅಲ್ಲ ಎಂದು ಅನ್ನಿಸಿಬಿಟ್ಟಿತು. ಹಾಗಾಗಿ ರಂಗಾಯಣ ರಘು ಹೆಸರು ಮೊದಲು ಹಾಕಿ, ಕೊನೆಯಲ್ಲಿ ನನ್ನ ಹೆಸರು ಹಾಕಿ ಎಂದು ರಾಘಣ್ಣ ಮನವಿ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ