‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
Ragini Dwivedi: ಇತ್ತೀಚೆಗೆ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ರಾಗಿಣಿ ಅವರು ಮಾತನಾಡಿದ್ದಾರೆ. ಅವರು ತಮ್ಮ ಅಭಿಪ್ರಾಯ ಏನು ಎಂಬುದನ್ನು ಹಂಚಿಕೊಂಡಿದ್ದಾರೆ. ಅಶ್ಲೀಲ ಕಮೆಂಟ್ ಮಾಡುವವರ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಈ ಪ್ರಕರಣದ ಬಗ್ಗೆ ನಟಿ ರಾಗಿಣಿ (Ragini Dwivedi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಜೀವನ ತುಂಬಾನೇ ಸಣ್ಣದು. ಹೀಗಾಗಿ, ಅದನ್ನು ಖುಷಿಯಿಂದ ಕಳೆಯಬೇಕು. ಈ ಅವಧಿಯಲ್ಲಿ ನೆಗೆಟಿವಿಟಿ ಹಂಚೋ ಬದಲು ಪಾಸಿಟಿವಿಟಿ ಹಂಚೋಣ, ಖುಷಿಯಿಂದಿರೋಣ. ನೆಗೆಟಿವಿಟಿ ಹರಡಲು ನಿಮ್ಮ ಬಳಿ ಟೈಮ್ ಇದೆ ಎಂದರೆ ನೀವು ತುಂಬಾ ದೊಡ್ಡ ಮನುಷ್ಯರು ಎಂದರ್ಥ’ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
