
[lazy-load-videos-and-sticky-control id=”d5sO-WmWci8″]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ ನಾಟಕದ ಹಿಂದಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ.
ಮಾಡಿದ್ದ ತಪ್ಪನ್ನು ಮುಚ್ಚಿಡಲಿಕ್ಕಾಗಿ ಅಂದು ಡ್ರಗ್ಸ್ ಟೆಸ್ಟ್ ವೇಳೆ ರಾಗಿಣಿ ಹೈಡ್ರಾಮಾ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಕ್ಕೆ ಈಗ ಸಿಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ. ಅದ್ರೆ ರಾಗಿಣಿ ಮಾತ್ರ ಈ ಬಗ್ಗೆ ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಬಾಯಿ ಬಿಟ್ಟಿರಲಿಲ್ಲ. ಶ್ರೀ ಬಂಧನದ ಬಳಿಕ ಪೊಲೀಸರಿಗೆ ಆಗಸ್ಟ್ ನಲ್ಲಿ ಡ್ರಗ್ಸ್ ಸೇವನೆ ಮಾಡಿದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಡ್ರಗ್ಸ್ ಟೆಸ್ಟ್ ಮಾಡ್ಸಿದ್ರೆ ತಾವು ಜೈಲಿಗೆ ಹೋಗ್ತಿವಿ, ನಾವು ಡ್ರಗ್ಸ್ ಟೆಸ್ಟ್ ಮಾಡಿಸಲ್ಲಾ ಎಂದು ಪೊಲೀಸರ ಬಳಿ ರಾಗಿಣಿ ನಾಟಕವಾಡಿದ್ದಳು.
ಕೋರ್ಟ್ ಆದೇಶ ನೀಡಿದ್ದರೂ ಡ್ರಗ್ಸ್ ಟೆಸ್ಟ್ ಮಾಡಿಸಲು ರಾಗಿಣಿ ಒಪ್ಪಿರಲಿಲ್ಲ. ಆದರೆ ಪೊಲೀಸರ ಬಲವಂತಕ್ಕೆ ಟೆಸ್ಟ್ ಮಾಡಲೇ ಬೇಕಾದ ಅನಿವಾರ್ಯತೆ ಬಂದಾಗ ಡ್ರಗ್ಸ್ ಟೆಸ್ಟ್ನಲ್ಲಿ ಸರಿಯಾದ ವರದಿ ಬರಬಾರದು ಎಂದು ರಾಗಿಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಟೆಸ್ಟ್ಗೆ ನೀಡಬೇಕಿದ್ದ ತಮ್ಮ ಮೂತ್ರದ ಮಾದರಿಗೆ ನೀರು ಬೆರೆಸಿ, ಅದನ್ನು ಡೈಲೂಟ್ ಮಾಡಲು ಯತ್ನಿಸಿದ್ದಾರೆ. ರಾಗಿಣಿ ಅಂದು ಅಸ್ಪತ್ರೆಯಲ್ಲಿ ಯಾಕೆ ಡ್ರಗ್ಸ್ ಟೆಸ್ಟ್ ಮಾಡಿಸಲು ಒಪ್ಪಿಲ್ಲಾ ಎನ್ನುವುದಕ್ಕೆ ಇದರೊಂದಿಗೆ ಸಿಸಿಬಿ ಉತ್ತರ ಕಂಡುಕೊಂಡಿದೆ.
Published On - 10:00 am, Tue, 22 September 20