ನಂಜುಂಡೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ: ಪ್ರಸಾದ ತಿನ್ನುವುದು ಹೇಗೆ ಎಂದು ಹೇಳಿಕೊಟ್ಟ ಡಿ.ಕೆ ಶಿವಕುಮಾರ!

| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2022 | 9:35 PM

ರಾಹುಲ್​ಗೆ ಹೂವಿನ ಹಾರ ಹಾಕಿ ಮುಖ್ಯ ಅರ್ಚಕರು ಸ್ವಾಗತಿಸಿದರು. ಮಳೆಯ ನಡುವೆಯು ರಾಹುಲ್​ ಗಾಂಧಿಯನ್ನು ನೋಡಲು ಜನರು ಕಟ್ಟಡದ ಮೇಲೆ ನಿಂತ್ತುಕೊಂಡಿದ್ದರು.

ಮೈಸೂರು: ಭಾರತ್ ಜೋಡೋ ಮೂರನೇ ದಿನದ ಪಾದಯಾತ್ರೆ ಇಂದು ಕಡಕೋಳದಿಂದ ಮೈಸೂರಿನತ್ತ ಆಗಮಿಸಿದ್ದು, ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ರಾಹುಲ್​ಗೆ ಹೂವಿನ ಹಾರ ಹಾಕಿ ಮುಖ್ಯ ಅರ್ಚಕರು ಸ್ವಾಗತಿಸಿದರು. ಮಳೆಯ ನಡುವೆಯು ರಾಹುಲ್​ ಗಾಂಧಿಯನ್ನು ನೋಡಲು ಜನರು ಕಟ್ಟಡದ ಮೇಲೆ ನಿಂತ್ತುಕೊಂಡಿದ್ದರು. ರಾಹುಲ್ ಗಾಂಧಿಗೆ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಾಥ್ ಕೊಟ್ಟರು. ದೇವಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಸರ್ಪಗಾವಲು ವಹಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.